ಕ್ರೀಡೆ

2016 ಒಲಂಪಿಕ್ಸ್ ಪದಕ ಪಟ್ಟಿಯಲ್ಲಿ ಅಮೆರಿಕಾ ಮೊದಲ ಸ್ಥಾನ: ಬ್ರಿಟಿಷ್ ಪಂಡಿತರ ಭವಿಷ್ಯ

Guruprasad Narayana
ಲಿವರ್ ಪೂಲ್: 2016 ರ ರಿಯೋ ಒಲಂಪಿಕ್ಸ್ ನಲ್ಲಿ ಅಮೆರಿಕಾ 99 ಪದಕಗಳನ್ನು ಗೆದ್ದು ಮೊದಲ ಸ್ಥಾನದಲ್ಲಿ ಮತ್ತು ಚೈನಾ 90 ಪದಕಗಳೊಂದಿಗೆ ಎರಡನೇ ಸ್ಥಾನದಲ್ಲಿ ಮಿಂಚಲಿವೆ ಎಂದು ಲಿವರ್ ಪೂಲ್ ವಿಶ್ವವಿದ್ಯಾಲಯದ ಕ್ರೀಡಾ ಮುನ್ಸೂಚಕ ಪಂಡಿತರು ಭವಿಷ್ಯ ನುಡಿದಿದ್ದಾರೆ. 
ಈ ತಂಡ ನುಡಿದಿದ್ದ ಭವಿಷ್ಯ 2008 ರಲ್ಲಿ ನಿಜವಾಗಿತ್ತು ಮತ್ತು ಈಗ ಅದನ್ನು ಮರುಕಳಿಸುವ ಭರವಸೆ ಹೊಂದಿದೆ. ಆದರೆ ಲಂಡನ್ ನಲ್ಲಿಯೇ ನಡೆದ 2012 ರ ಒಲಂಪಿಕ್ಸ್ ನಲ್ಲಿ ಇವರ ಭವಿಷ್ಯ ಸುಳ್ಳಾಗಿತ್ತು. 
ವಿಶ್ವವಿದ್ಯಾಲಯದ ಪ್ರಬಂಧಕ ಶಾಲೆಯ ಪ್ರೊಫೆಸರ್ ಗಳಾದ ಡೇವಿಡ್ ಫಾರೆಸ್ಟ್ ಮತ್ತು ಜುವಾನ್ ಡೇ ಡಿಯೋಸ್ ತೆನಾ, ಸ್ಯಾಲ್ಫರ್ಡ್ ವಿಶ್ವವಿದ್ಯಾಲಯದ ಇಯಾನ್ ಮೆಕ್ ಹಾಲ್ ಅವರೊಂದಿಗೆ ಕೂಡಿ, ರಿಯೋ 2016 ರ ಒಲಂಪಿಕ್ಸ್ ನಲ್ಲಿ ಪ್ರತಿ ತಂಡಗಳು ಪಡೆಯುವ ಪದಕ ಪಟ್ಟಿಯ ಭವಿಷ್ಯ ಬರೆದಿದ್ದಾರೆ. ಈ ತಂಡ ಇದಕ್ಕಾಗಿ ಸ್ಟ್ಯಾಟಿಸ್ಟಿಕಲ್ ಮಾಡಲಿಂಗ್ ಬಳಸಿದೆ. 
ಈ ಪಟ್ಟಿಯ ಪ್ರಕಾರ ಅಮೆರಿಕಾ (99), ಚೈನಾ (90) ಮತ್ತು ಗ್ರೇಟ್ ಬ್ರಿಟನ್ (51) ಪದಕಗಳೊಂದಿಗೆ ಮೊದಲ ಮೂರೂ ಸ್ಥಾನಗಳಲ್ಲಿ ವಿಜೃಂಭಿಸಲಿದ್ದರೆ, ನಂತರದ ಸ್ಥಾನಗಳಲ್ಲಿ ಜರ್ಮನಿ (36), ಜಪಾನ್ (31), ಫ್ರಾನ್ಸ್ (30), ಇಟಲಿ (26), ನೆದರ್ ಲ್ಯಾಂಡ್ಸ್ (20), ಸ್ಪೇನ್ (20) ಇರಲಿವೆ ಎನ್ನಲಾಗಿದೆ. 
SCROLL FOR NEXT