ಲಿಯಾಂಡರ್ ಪೇಸ್ 
ಕ್ರೀಡೆ

ರಿಯೋ ಒಲಂಪಿಕ್ಸ್: ಟೆನ್ನಿಸ್ ತಾರೆ ಲಿಯಾಂಡರ್ ಪೇಸ್ ಗೆ ಸಿಕ್ಕಿಲ್ಲ ಕೊಠಡಿ

ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಅವರಿಗೆ ರಿಯೋ ಒಲಂಪಿಕ್ಸ್ ನಲ್ಲಿ ಸೂಕ್ತ ವಸತಿ ಸೌಲಭ್ಯ ಒದಗಿಸದೇ ಇರುವುದು ತಿಳಿದು ಬಂದಿದೆ.

ನವದೆಹಲಿ: ಆರು ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಅವರಿಗೆ ರಿಯೋ ಒಲಂಪಿಕ್ಸ್ ನಲ್ಲಿ  ಸೂಕ್ತ ವಸತಿ ಸೌಲಭ್ಯ ಒದಗಿಸದೇ ಇರುವುದು ತಿಳಿದು ಬಂದಿದೆ.

ಗುರುವಾರವೇ ರಿಯೋ ತಲುಪಿದ್ದೇನೆ. ಇಲ್ಲಿಯವರೆಗೂ ನನಗೆ ವಿಶ್ರಾಂತಿ ಪಡೆಯಲು ಒಂದು ಕೊಠಡಿ ನೀಡಿಲ್ಲ. ಇದರಿಂದಾಗಿ ಭಾರತಿಯ ತಂಡದ ನಿರ್ದೇಶಕ ರಾಕೇಶ್ ಗುಪ್ತಾ ಅವರ ಕೊಠಡಿಯಲ್ಲಿ ತಂಗಿರುವುದಾಗಿ ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನೂ ಲಿಯಾಂಡರ್ ಪೇಸ್ ಗೆ ರೋಹನ್ ಬೋಪಣ್ಣ ಜೊತೆ ಫ್ಲ್ಯಾಟ್ ಹಂಚಿಕೊಳ್ಳಲು ತಿಳಿಸಿದಾಗ ಪೇಸ್ ಅದನ್ನು ನಿರಾಕರಿಸಿದ್ದಾರೆ ಎಂದು ಇಂಡಿಯಾ ಟೆನ್ನಿಸ್ ಕೋಚ್ ಜೀಶನ್ ಅಲಿ ಆರೋಪಿಸಿದ್ದಾರೆ.

ಇನ್ನು ರೋನ್ ಬೋಪಣ್ಣ ಜತೆಗೆ ಕೊಠಡಿ ಹಂಚಿಕೊಳ್ಳಲು ಒಪ್ಪಿಕೊಂಡಿಲ್ಲ ಎಂದು ಮಾಧ್ಯಮಗಳಲ್ಲಿ ತಪ್ಪು ವರದಿಯಾಗಿದೆ. ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ. ನಾನು ಹಾಗೆ ಹೇಳಿಯೂ ಇಲ್ಲ ಎಂದು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ. ಮಾಧ್ಯಮಗಳಲ್ಲಿ ಪ್ರಕಟಿಸಿರುವ ಈ ವರದಿ ನನಗೆ ನೋವುಂಟು ಮಾಡಿದೆ ಎಂದು ಪೇಸ್ ಹೇಳಿದ್ದಾರೆ.

ಭಾರತೀಯ ಆಟಗಾರರಿಗೆ ನೀಡಲಾಗಿರುವ ಅಪಾರ್ಟ್​ಮೆಂಟ್​ನಲ್ಲಿ ಪೀಠೋಪಕರಣಗಳ ಕೊರತೆ ಇದೆ. ಕುಳಿತುಕೊಳ್ಳಲು ಚೇರ್ ಇಲ್ಲ, ಒಂದು ಟೇಬಲ್ ಇಲ್ಲ ಮತ್ತು ಟಿವಿ ಇಲ್ಲ. ಆಟಗಾರರಿಗೆ ನೀಡಲಾಗಿರುವ ಅಪಾರ್ಟ್​ಮೆಂಟ್​ನಲ್ಲಿ ಮೂಲಭೂತ ಸೌಕರ್ಯ ಒದಗಿಸಲಾಗಿಲ್ಲ. ಒಂದು ಅಪಾರ್ಟ್​ವೆುಂಟ್​ನಲ್ಲಿ 6 ಜನರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.

ಆಗಸ್ಟ್ 6 ರಂದು ರೋಹನ್ ಬೋಪಣ್ಣ ಮತ್ತು ಲಿಯಾಂಡರ್ ಪೇಸ್ ರಿಯೋ ಒಲಂಪಿಕ್ಸ್ ನಲ್ಲಿ ಟೆನ್ನಿಸ್ ಡಬಲ್ಸ್ ಆಡಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT