ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಲೈಂಗಿಕ ಕಿರುಕುಳ ಆರೋಪ : ಮೊರಕ್ಕನ್ ಬಾಕ್ಸರ್ ಬಂಧನ

ಒಲಿಂಪಿಕ್ ಗ್ರಾಮದಲ್ಲಿ ಇಬ್ಬರು ಮಹಿಳಾ ಕ್ಲೀನರ್ ಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಕ್ಕಾಗಿ...

ಮೊರಕ್ಕನ್ ಬಾಕ್ಸರ್ ಹಸ್ಸನ್ ಸಾಡಾ(ಸಂಗ್ರಹ ಚಿತ್ರ)
Sumana Upadhyaya
Updated On : 6 Aug 2016, 6:38 am
ರಿಯೊ ಡಿ ಜನೈರೊ: ಒಲಿಂಪಿಕ್ ಗ್ರಾಮದಲ್ಲಿ ಇಬ್ಬರು ಮಹಿಳಾ ಕ್ಲೀನರ್ ಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಕ್ಕಾಗಿ ಮೊರಕ್ಕನ್ ಬಾಕ್ಸರ್ ಹಸ್ಸನ್ ಸಾಡಾ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕ್ರೀಡಾಪಟುವನ್ನು ಗುರುವಾರ ರಾತ್ರಿ ಬಂಧಿಸಲಾಗಿದ್ದು, ಆರಂಭದಲ್ಲಿ ಪೊಲೀಸ್ ಲಾಕಪ್ ನಲ್ಲಿ ಬಂಧಿಸಲಾಯಿತು ಎಂದು ರಿಯೊ ಡಿ ಜನೈರೊದ ನಾಗರಿಕ ಪೊಲೀಸ್ ಪಡೆಯ ವಕ್ತಾರ ತಿಳಿಸಿದ್ದಾರೆ.
22 ವರ್ಷದ ಬಾಕ್ಸರ್ ಸಾಡಾ, ತಮ್ಮ ಮೇಲೆ ಲೈಂಗಿಕವಾಗಿ ಹಲ್ಲೆ ನಡೆಸಿದರು ಎಂದು ಮಹಿಳೆಯರು ಆರೋಪಿಸಿದ್ದಾರೆ. 

Advertisement

Advertisement

ಮಾಹಿತಿ ಕೇಳುವ ನೆಪದಲ್ಲಿ ಇಬ್ಬರು ಮಹಿಳೆಯರನ್ನು ತನ್ನ ಕೋಣೆಗೆ ಕರೆದ ಸಾಡಾ, ಮತ್ತಿಬ್ಬರು ಅಥ್ಲೀಟ್ ಗಳ ಸಮ್ಮುಖದಲ್ಲಿ ಮಹಿಳೆಯರ ಕಾಲು ಮತ್ತು ಎದೆ ಮುಟ್ಟಿದರು. ಆಗ ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಬಂದೆವು ಎಂದು ಮಹಿಳೆಯರು ತಿಳಿಸಿದ್ದಾರೆ.
ಸಾಡಾ ಅವರು ಇಂದು ಟರ್ಕಿಯ ಮೆಹ್ಮತ್ ನಾದಿರ್ ಉನಲ್ ಜೊತೆ ಆಡಬೇಕಾಗಿತ್ತು. ಆದರೆ 15 ದಿನಗಳವರೆಗೆ ಬಂಧನದಲ್ಲಿಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement