ಕ್ರೀಡೆ

ಮಹಿಳೆಯರ 10 ಮೀ. ಏರ್ ಪಿಸ್ತೂಲ್ ಶೂಟಿಂಗ್, ಹೀನಾ ಸಿಂಧುಗೆ ನಿರಾಸೆ

Lingaraj Badiger
ರಿಯೋ ಡಿ ಜನೈರೋ: ಭಾರತದ ಭರವಸೆಯ ಶೂಟರ್ ಹೀನಾ ಸಿಂಧು ಭಾನುವಾರ ನಡೆದ ಮಹಿಳೆಯರ 10 ಮೀ. ಏರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ 14ನೇ ಸ್ಥಾನ ಪಡೆಯುವ ಮೂಲಕ ಫೈನಲ್​ಗೆ ಅರ್ಹತೆ ಪಡೆಯಲು ವಿಫಲರಾಗಿದ್ದಾರೆ.
ಅರ್ಹತಾ ಸುತ್ತಿನಲ್ಲಿ 44 ಶೂಟರ್​ಗಳ ಪೈಕಿ 380 ಅಂಕ ಕಲೆ ಹಾಕಿದ ಹೀನಾ 14 ನೇ ಸ್ಥಾನ ಪಡೆದರು. ರಷ್ಯಾದ ವಿಟಲಿನಾ 390 ಅಂಕ ಕಲೆ ಹಾಕಿ ಪ್ರಥಮ ಸ್ಥಾನ ಪಡೆದರು.
ಹೀನಾ ಸಿಂಧು ಆಗಸ್ಟ್ 9 ರಂದು ನಡೆಯಲಿರುವ 25 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ತೋರಬೇಕಿದೆ.
ಹೀನಾ 2010ರಲ್ಲಿ ಏಷ್ಯನ್ ಗೇಮ್ಸ್​ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು.
SCROLL FOR NEXT