ರಿಯೋ ಡಿ ಜನೈರೊ: ಭಾರತದ ದತ್ತು ಬಬನ್ ಭೊಕನಲ್ ಅವರು ರೋಯಿಂಗ್ ಸಿಂಗಲ್ ಸ್ಕಲ್ಸ್ ನ ಕ್ವಾರ್ಟರ್ ಫೈನಲ್ ನಲ್ಲಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ರಿಯೋ ಒಲಿಂಪಿಕ್ಸ್ ನಿಂದ ಹೊರಬಿದ್ದಿದ್ದಾರೆ.
ಅರ್ಹತಾ ಸುತ್ತಿನಲ್ಲಿ ಮೂರನೇ ಸ್ಥಾನ ಪಡೆದು ಕ್ವಾರ್ಟರ್ ಫೈನ್ ಪ್ರವೇಶಿಸಿದ್ದ ಸೇನೆಯ ರೋವರ್ ದತ್ತು ಇಂದು ನಡೆದ ನಾಲ್ಕನೇ 2000 ಮೀ, ಸಿಂಗಲ್ ಸ್ಕಲ್ಸ್ ಕ್ವಾರ್ಟರ್ ಫೈನಲ್ ನಲ್ಲಿ 6 ನಿಮಿಷ 59.89 ಸೆಕೆಂಡ್ಸ್ ಗಳಲ್ಲಿ ಗುರಿ ತಲುಪಿದರೂ ಸೆಮಿಫೈನಲ್ ಹಂತಕ್ಕೇರಲು ಸಾಧ್ಯವಾಗಲಿಲ್ಲ,
ಒಂದು ಹಂತದಲ್ಲಿ ಮೂರನೇ ಸ್ಥಾನದಲ್ಲಿದ್ದ ದತ್ತು ವೇಗ ಕಾಯ್ಜುಕೊಳ್ಳವಲ್ಲಿ ವಿಫಲವಾದರು. ಪರಿಣಾಮ ನಾಲ್ಕನೇ ಸ್ಥಾನದಲ್ಲಿದ್ದ ಪೋಲೆಂಡ್ ನ ರೋವರ್ ನತಾನ್ ವೆಗ್ರೆಸ್ಕಿ ಸೈಮ್ಷೆಕ್ ಅವರು ಮೂರನೇ ಸ್ಥಾನ ಪಡೆದು ಸೆಮಿಫೈನಲ್ ಗೆ ಅರ್ಹತೆ ಪಡೆದುಕೊಂಡರು. ಕ್ರೊಯೇಷ್ಯಾದ ಡಾಮಿರ್ ಮಾರ್ಟಿನ್ ಮೊದಲ ಸ್ಥಾನ ಪಡೆದರೆ, ಬ್ರಿಟನ್ ನ ಅಲಾನ್ ಕ್ಯಾಂಪ್ ಬೆಲ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.