ರಿಯೋ ಡಿ ಜನೈರೋ: ರಿಯೋ ಒಲಿಂಪಿಕ್ಸ್ ನಲ್ಲಿ ಭಾರತ ಹಾಕಿ ತಂಡ ಮೂರನೇ ಪಂದ್ಯದಲ್ಲಿ ಗೆಲುವು ದಾಖಲಿಸಿದೆ.
ವಿಶ್ವ ನಂಬರ್ 7 ಸ್ಥಾನದಲ್ಲಿರುವ ಅರ್ಜೇಂಟೀನಾ ತಂಡವ್ನು ಪಿಆರ್ ಶ್ರೀಜೇಶ್ ಸಾರಥ್ಯದ ಭಾರತ ತಂಡ 2-1 ಗೋಲುಗಳಿಂದ ಮಣಿಸಿದೆ.
ರಿಯೋ ಒಲಿಂಪಿಕ್ಸ್ ಹಾಕಿಯಲ್ಲಿ ಎರಡು ಜಯ ಗಳಿಸಿರುವ ಭಾರತ ಬಿ ಗುಂಪಿನಲ್ಲಿ 6 ಅಂಕಗಳೊಂದಿಗೆ 2ನೇ ಸ್ಥಾನಕ್ಕೇರಿದ್ದು ಕ್ವಾರ್ಟರ್ ಫೈನಲ್ ಅರ್ಹತೆಯ ಬಲ ಹೆಚ್ಚಿಸಿದೆ.
ಐರ್ಲೇಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಗೆದ್ದಿದ್ದ ಭಾರತ ಎರಡನೇ ಪಂದ್ಯದಲ್ಲಿ ಜರ್ಮನಿ ವಿರುದ್ಧ ಸೋಲು ಕಂಡಿತ್ತು.