ದೀಪಾ ಕರ್ಮಾಕರ್ 
ಕ್ರೀಡೆ

ರಿಯೋ ಒಲಿಂಪಿಕ್ಸ್: ಪದಕದ ಭರವಸೆ ಮೂಡಿಸಿರುವ ದೀಪಾ ಕರ್ಮಾಕರ್ ಗೆ ಗೃಹ ಬಂಧನ

ಜಿಮ್ನಾಸ್ಟಿಕ್ ಮೂಲಕ ಇದೇ ಮೊದಲ ಬಾರಿಗೆ ರಿಯೋ ಒಲಿಂಪಿಕ್ಸ್ ಫೈನಲ್ ಗೆ ತಲುಪಿ ಪದಕದ ಭರವಸೆ ಮೂಡಿಸಿರುವ ಭಾರತೀಯ ಆಟಗಾರ್ತಿ ದೀಪಾ...

ರಿಯೋ ಡಿ ಜನೈರೋ: ಜಿಮ್ನಾಸ್ಟಿಕ್ ಮೂಲಕ ಇದೇ ಮೊದಲ ಬಾರಿಗೆ ರಿಯೋ ಒಲಿಂಪಿಕ್ಸ್ ಫೈನಲ್ ಗೆ ತಲುಪಿ ಪದಕದ ಭರವಸೆ ಮೂಡಿಸಿರುವ ಭಾರತೀಯ ಆಟಗಾರ್ತಿ ದೀಪಾ ಕರ್ಮಾಕರ್ ರನ್ನು ಗೃಹ ಬಂಧನದಲ್ಲಿಡಲಾಗಿದೆ.

ಕಾರಣ ಇಷ್ಟೇ... ರಿಯೋ ಒಲಿಂಪಿಕ್ಸ್ ನ ಜಿಮ್ನಾಸ್ಟಿಕ್ ನಲ್ಲಿ ಫೈನಲ್ ತಲುಪಿರುವ ದೀಪಾ ಕರ್ಮಾಕರ್ ಪದಕ ಭರವಸೆ ಮೂಡಿಸಿದ್ದು ಕಠಿಣ ಸಿದ್ಧತೆ ನಡೆಸಲಿ ಎಂದು ಅವರ ಕೋಚ್ ಬಿಶ್ವೇಶ್ವರ ನಂದಿ ಅವರೇ ಈ ಕ್ರಮ ಕೈಗೊಂಡಿದ್ದಾರಂತೆ. ಪದಕ ಗೆಲ್ಲುವುದತ್ತ ಆಕೆ ಗಮನ ಹರಿಯಬೇಕೇ ಹೊರತು ಬೇರಡೆ ಹರಿಯದಿರಲಿ. ಯಾರಿಂದಲೂ ದೀಪಾ ತೊಂದರೆಗೊಳಗಾಗದಿರಲಿ ಎಂಬ ಉದ್ದೇಶ ನನ್ನದು ಎಂದು ಕೋಚ್ ಹೇಳಿದ್ದಾರೆ.

ಮಂಗಳವಾರ ಅವರ ಹುಟ್ಟು ಹಬ್ಬವಾಗಿದ್ದರಿಂದ ಅವರಿಗೆ ಅಭಿಮಾನಿಗಳು ಶುಭಾಶಯ ತಿಳಿಸಲು ಹಾತೋರೆಯುತ್ತಿದ್ದರು. ಆದರೆ ಅಪ್ಪ ಅಮ್ಮ ಬಿಟ್ಟು ಬೇರೆ ಯಾರಿಗೂ ದೀಪಾರನ್ನು ಸಂಪರ್ಕಿಸುವ ಅವಕಾಶವನ್ನು ನೀಡಿಲ್ಲ.

ಆಗಸ್ಟ್ 14ರಂದು ಜಿಮ್ನಾಸ್ಟಿಕ್ ಫೈನಲ್ ಸ್ಪರ್ಧೆ ನಡೆಯಲಿದ್ದು, ಸ್ಪರ್ಧೆಯಲ್ಲಿ ತಮ್ಮ ಶಿಷ್ಯೆ ಗೆಲ್ಲಲೇಬೇಕು ಎಂಬುದು ಕೋಚ್ ಬಿಶ್ವೇಶ್ವರ ನಂದಿ ಹಾಗೂ ಕೋಟ್ಯಾಂತರ ಭಾರತೀಯರ ಆಶೆಯವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT