ರಿಯೊ ಒಲಿಂಪಿಕ್ಸ್ ನಲ್ಲಿ 100 ಮೀಟರ್ ಬಟರ್ ಫ್ಲೈ ಈಜು ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ ಸಿಂಗಾಪೂರದ ಜೋಸೆಫ್ ಸ್ಕೂಲಿಂಗ್ ಗೆ ಅಮೆರಿಕದ ಮೈಕೆಲ್ ಫೆಲ್ಪ್ಸ್ ಅಭಿನಂದನೆ ಸಲ್ಲಿಸುತ್ತ
ರಿಯೊ ಡಿ ಜನೈರೊ: ಸಿಂಗಾಪೂರದ ಈಜುಗಾರ ಜೋಸೆಫ್ ಸ್ಕೂಲಿಂಗ್ ಇಂದು(ಶನಿವಾರ) ಬೆಳಗ್ಗೆ ನಡೆದ 100 ಮೀಟರ್ ಬಟರ್ ಫ್ಲೈಯಲ್ಲಿ ಅಮೆರಿಕದ ದಾಖಲೆಯ ಈಜುಗಾರ ಮೈಕೆಲ್ ಫೆಲ್ಪ್ಸ್ ಅವರನ್ನು ಸೋಲಿಸಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
21 ವರ್ಷದ ಸಿಂಗಾಪೂರದ ಈಜುಗಾರ ಜೋಸೆಫ್ ಸ್ಕೂಲಿಂಗ್ ರಿಯೊ ಒಲಿಂಪಿಕ್ಸ್ ನಲ್ಲಿ 3 ಚಿನ್ನದ ಪದಕ ಸೇರಿದಂತೆ ಇದುವರಿಗಿನ ತಮ್ಮ ಒಲಿಂಪಿಕ್ಸ್ ವೃತ್ತಿಬದುಕಿನಲ್ಲಿ 26 ಪದಕಗಳನ್ನು ಗಳಿಸಿದ್ದ ಮೈಕೆಲ್ ಅವರನ್ನು ಸೋಲಿಸುವ ಮೂಲಕ ವಿಶ್ವದ ಕ್ರೀಡಾಪ್ರೇಮಿಗಳ ಗಮನ ಸೆಳೆದಿದ್ದಾರೆ.
ಮೈಕೆಲ್ ಗೆ ತಮ್ಮ ವೃತ್ತಿ ಬದುಕಿನಲ್ಲಿ ರಿಯೊ ಒಲಿಂಪಿಕ್ಸ್ ನಲ್ಲಿ ಇನ್ನೊಂದು ಚಿನ್ನದ ಪದಕ ಪಡೆಯುವ ಅವಕಾಶವಿದೆ. 400 ಮೀಟರ್ ಬಟರ್ ಫ್ಲೈ ಈಜು ಸ್ಪರ್ಧೆ ಇಂದು ರಾತ್ರಿ ನಡೆಯಲಿದೆ. 100 ಮೀಟರ್ ಬಟರ್ ಫ್ಲೈನಲ್ಲಿ ಅವರು ಇಂದು ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಅವರ ಜತೆ ದಕ್ಷಿಣ ಆಫ್ರಿಕಾದ ಚದ್ ಲೆ ಕ್ಲೊಸ್ ಮತ್ತು ಹಂಗೇರಿಯಾದ ಲಸ್ಜ್ಲೋ ಕ್ಸೆಹ್ ಕೂಡ ಬೆಳ್ಳಿ ಪದಕ ಗಳಿಸಿದ್ದಾರೆ. ಸ್ಕೂಲಿಂಗ್ ಅವರ ಜಯದ ಸಮಯ 50.39 ಸೆಕೆಂಡ್ ಆದರೆ ಬೆಳ್ಳಿ ಪದಕ ಗಳಿಸಿದ್ದವರದ್ದು 51.14 ಸೆಕೆಂಡ್ ಆಗಿದೆ.