ಸೆಮಿ ಫೈನಲ್ ಪ್ರವೇಶಿಸಿದ ಸಾನಿಯಾ-ಬೋಪಣ್ಣ
ರಿಯೋ ಡಿ ಜನೇರೋ: ರಿಯೋ ಒಲಂಪಿಕ್ಸ್ ಪಂದ್ಯಗಳ ಟೆನಿಸ್ ಮಿಶ್ರ ಡಬಲ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿರುವ ಸಾನಿಯಾ ಮಿರ್ಜಾ ಮತ್ತು ರೋಹನ್ ಬೋಪಣ್ಣ ಜೋಡಿ, ಬ್ರಿಟನ್ ನ ಆಂಡಿ ಮುರ್ರೆ ಮತ್ತು ಹಿತರ್ ವ್ಯಾಟ್ಸನ್ ಅವರ ಮೇಲೆ ಸುಲಭ ಜಯಗಳಿಸಿ ಸೆಮಿ ಫೈನಲ್ಸ್ ಪ್ರವೇಶಿಸಿದ್ದಾರೆ.
ವಿಶ್ವ ರ್ಯಾಂಕಿಂಗ್ ನಲ್ಲಿ 4 ನೇ ಸ್ಥಾನದಲ್ಲಿರುವ ಈ ಜೋಡಿ, ಇಡೀ ಪಂದ್ಯದಲ್ಲಿ ಆಕ್ರಮಣಕಾರಿಯಾಗಿ ಆಡಿ ಕೇವಲ 67 ನಿಮಿಷಗಳಲ್ಲಿ 6-4 6-4 ರ ಸ್ಕೋರ್ ನೊಂದಿಗೆ ಜಯಗಳಿಸದೆ.
ಮತ್ತೊಂದು ಗೆಲುವು ಭಾರತಕ್ಕೆ ಕನಿಷ್ಠ ಬೆಳ್ಳಿ ಪದಕವನ್ನು ಧೃಢೀಕರಣಗೊಳಿಸಲಿದೆ. ಸೆಮಿ ಫೈನಲ್ಸ್ ನಲ್ಲಿ ಸೋತರೆ ಈ ಜೋಡಿ ಕಂಚಿನ ಪದಕಕ್ಕೆ ಸೆಣಸಲಿದೆ.
ಇಡೀ ಒಲಂಪಿಕ್ ಇತಿಹಾಸದಲ್ಲಿ ಟೆನಿಸ್ ಆಟದಲ್ಲಿ ಭಾರತ ಇಲ್ಲಿಯವರೆಗೆ ಒಂದೇ ಪದಕ ಗೆದ್ದಿರುವುದು. 1996 ಅಟ್ಲಾಂಟಾ ಒಲಂಪಿಕ್ಸ್ ನಲ್ಲಿ ಟೆನಿಸ್ ಪುರುಷರ ಸಿಂಗಲ್ಸ್ ನಲ್ಲಿ ಲಿಯಾಂಡರ್ ಪೇಸ್ ಕಂಚು ಗೆದ್ದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics