ಮಿಶ್ರ ಡಬಲ್ಸ್ ಸೆಮಿ ಫೈನಲ್ ನಲ್ಲಿ ಝೆಕ್ ರಿಪಬ್ಲಿಕನ್ ನ ಲೂಸಿ ಹ್ರದೇಕ ಮತ್ತು ರಡೆಕ್ ಸ್ಟೆಪನೆಕ್ ವಿರುದ್ಧ 1-6, 5-7 ಅಂತರದಲ್ಲಿ ಪರಾಭವಗೊಂಡ ಸಾನಿಯಾ ಮಿರ್ಜಾ-ರೋಹನ್ ಬೋಪಣ್ಣ 
ಕ್ರೀಡೆ

ಮುಂದಿನ ಒಲಿಂಪಿಕ್ಸ್ ನಲ್ಲಿ ಆಡುವುದು ಅನುಮಾನ: ಸಾನಿಯಾ ಮಿರ್ಜಾ

ತಮ್ಮ ಜೋಡಿ ರೋಹನ್ ಬೋಪಣ್ಣ ಅವರೊಂದಿಗೆ ಮಿಶ್ರ ಡಬಲ್ಸ್ ಟೆನ್ನಿಸ್ ನಲ್ಲಿ ಕಂಚಿನ ಪದಕ ಗಳಿಸುವಲ್ಲಿ ವಿಫಲರಾದ...

ರಿಯೊ ಡಿ ಜನೈರೊ: ತಮ್ಮ ಜೋಡಿ ರೋಹನ್ ಬೋಪಣ್ಣ ಅವರೊಂದಿಗೆ ಮಿಶ್ರ ಡಬಲ್ಸ್ ಟೆನ್ನಿಸ್ ನಲ್ಲಿ ಕಂಚಿನ ಪದಕ ಗಳಿಸುವಲ್ಲಿ ವಿಫಲರಾದ ಸಾನಿಯಾ ಮಿರ್ಜಾ ಮಾಧ್ಯಮದವರೆದುರು ಕಣ್ಣೀರು ಸುರಿಸಿದರು. ಮುಂದಿನ ಒಲಿಂಪಿಕ್ಸ್ ನಲ್ಲಿ ಆಡುವುದು ಅನುಮಾನ ಎಂಬ ಸಂಶಯವನ್ನೂ ಅವರು ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದಾರೆ.
ಭಾರತ, ಮೊದಲ ಪದಕ ನಿರೀಕ್ಷೆಯನ್ನು ಸಾನಿಯಾ-ರೋಹನ್ ಜೋಡಿ ಮೇಲೆ ಇಟ್ಟಿತ್ತು. ಆದರೆ ಅವರು 1-6, 5-7 ಅಂತರದಿಂದ ಜೆಕ್ ನ ಲೂಸಿ ಹ್ರದೇಕ ಮತ್ತು ರಡೆಕ್ ಸ್ಟೆಪನೆಕ್ ಅವರ ಎದುರು ನಿನ್ನೆ ಸೋಲನುಭವಿಸಿದರು.
ನಮ್ಮ ಸೋಲನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮುಂದಿನ ನಾಲ್ಕು ವರ್ಷಗಳ ನಂತರ ಜಪಾನ್ ನ ಟೋಕ್ಯೋದಲ್ಲಿ  ನಡೆಯುವ ಒಲಿಂಪಿಕ್ಸ್ ನಲ್ಲಿ ಭಾಗವಹಿಸುತ್ತೀನೋ, ಇಲ್ಲವೋ ಎಂದು ಸಂಶಯ ಬರುತ್ತಿದೆ ನನಗೆ. ಅವರ ಕಣ್ಣುಗಳು ತುಂಬಿ ಬದ್ದಿದ್ದವು. ಅದಕ್ಕೂ ಮುನ್ನ ಟಿ ವಿ ಪತ್ರಕರ್ತರೊಬ್ಬರಿಗೆ ನೀಡಿದ್ದ ಸಂದರ್ಶನದ ವೇಳೆ ಕೂಡ ಅಪಾರವಾಗಿ ಅತ್ತಿದ್ದರು ಸಾನಿಯಾ.
ಈ ಸೋಲಿನಿಂದ ಹೊರಗೆ ಬರಲು ನನಗೆ ಸ್ವಲ್ಪ ಸಮಯ ಬೇಕು. ದುರಾದೃಷ್ಟವಶಾತ್ ನಮಗೆ ಇಂದು ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಕ್ರೀಡಾಪಟುಗಳಾಗಿ ನಾವು ಸೋಲಿನಿಂದ ಪುಟಿದೆದ್ದು, ಮತ್ತೆ ಗೆಲುವಿನ ಹಾದಿಗೆ ಬರಬೇಕು ಎಂದರು.
ಝೆಕ್ ಜೊತೆ ಎರಡನೇ ಸೆಟ್ ನಲ್ಲಿ ಗೆಲ್ಲಬಹುದಾಗಿತ್ತು, ಆದರೆ ಪರಿಸ್ಥಿತಿಯನ್ನು ತಮ್ಮ ಪರವಾಗಿ ಅನುಕೂಲಗೊಳಿಸಲು ಸಾಧ್ಯವಾಗಲಿಲ್ಲ. ಟೆನ್ನಿಸ್ ನಲ್ಲಿ ಅವಕಾಶಗಳು ಅನುಕೂಲವಾಗಿ ಪರಿವರ್ತಿಸಲು ಸಾಧ್ಯವಾಗದಿದ್ದರೆ ಪಂದ್ಯಗಳಲ್ಲಿ ಸೋಲುತ್ತೇವೆ. ಈ ಸಂದರ್ಭದಲ್ಲಿ ಇದಕ್ಕಿಂತ ಹೆಚ್ಚು ಹೇಳಲು ಸಾಧ್ಯವಿಲ್ಲ. ನಾವು ಮುನ್ನಡೆಯಬೇಕಾಗಿದೆ ಎಂದು ಸೋಲಿನಿಂದ ಕುಗ್ಗಿರುವ ಸಾನಿಯಾ ಹೇಳಿದರು. ಅವರು ಎಷ್ಟು ನೋವಿನಿಂದ ಕಂಗೆಟ್ಟು ಹೋಗಿದ್ದರೆಂದರೆ ಕೆಲವು ಪತ್ರಕರ್ತರು ಹಿಂದಿ ಭಾಷೆಯಲ್ಲಿ ಮಾತನಾಡುವಂತೆ ಹೇಳಿದಾಗಲೂ ನಿರಾಕರಿಸಿದರು.
ರೋಹನ್ ಬೋಪಣ್ಣ ಕೂಡ ತೀವ್ರ ಕುಗ್ಗಿ ಹೋಗಿದ್ದಾರೆ. ಕಳೆದ 24 ಗಂಟೆಗಳಲ್ಲಿ ನಾವು ಎರಡು ಪ್ರಮುಖ ಪಂದ್ಯಗಳನ್ನು ಸೋತಿದ್ದೇವೆ. ಮುಂದಿನ ಒಲಿಂಪಿಕ್ಸ್ ನಲ್ಲಿ ಆಡುವುದರ ಕುರಿತು ಕೇಳಿದಾಗ, ಆ ಬಗ್ಗೆ ಈ ದಿನ ಯೋಚಿಸುವುದೇ ಕಷ್ಟ. ನಾಲ್ಕು ವರ್ಷದ ಮುಂದಿನದ್ದನ್ನು ಈಗಲೇ ಯೋಚಿಸುವುದು ಬಹಳ ಕಷ್ಟ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

ಮಗು ಆಡಿಸುತ್ತಿದ್ದ ವ್ಯಕ್ತಿ ಮೇಲೆ ಗೂಳಿ ದಾಳಿ; ರಕ್ಷಣೆಗೆ ಧಾವಿಸಿದ ಮಹಿಳೆ, Video ವೈರಲ್

'ಭಾರತೀಯನ ಮದುವೆಯಾದಾಕ್ಷಣ Indian ಆಗಲ್ಲ, ಬಾಂಗ್ಲಾದೇಶಿ ಪತ್ನಿಗೆ ಭಾರತ ಪ್ರವೇಶ ನಿರಾಕರಣೆ ಸರಿ ಇದೆ': ಹೈಕೋರ್ಟ್

CM ಡಿ.ಕೆ. ಶಿವಕುಮಾರ್‌ಗಾಗಿ IndiGo flight ಲೇಟ್? VVIP ಸಂಸ್ಕೃತಿ ವಿರುದ್ಧ ಪ್ರಯಾಣಿಕರ ಆಕ್ರೋಶ..!