ಜಪಾನ್ ನ ನಝೋಮಿ ಒಕುಹರ ಅವರನ್ನು ಸೋಲಿಸಿದ ನಂತರ ಭಾರತದ ಪಿವಿ ಸಿಂಧು ಸಂಭ್ರಮಿಸಿದ ಚಿತ್ರ.
ರಿಯೋ ಡಿ ಜನೈರೋ: ರಿಯೋ ಒಲಂಪಿಕ್ಸ್ ನಲ್ಲಿ ಕುಸ್ತಿ ಪಟು ಸಾಕ್ಷಿ ಮಲಿಕ್ ಪದಕ ಗೆದ್ದ ಬೆನ್ನಲ್ಲೆ, ಮಹಿಳಾ ಬಾಡ್ಮಿಂಟನ್ ವಿಭಾಗದಲ್ಲಿ ಪಿವಿ ಸಿಂಧು ಫೈನಲ್ ಪ್ರವೇಶಿಸಿದ್ದು, ಭಾರತಕ್ಕೆ ಮತ್ತೊಂದು ಪದಕ ಸಿಗುವುದು ಖಚಿತವಾಗಿದೆ.
ಸೆಮಿಫೈನಲ್ ಪಂದ್ಯದಲ್ಲಿ ಜಪಾನ್ ನ ನೊಜೋಮಿ ಒಕುಹಾರ ಅವರನ್ನು 21-19, 21-10 ಅಂತರದಲ್ಲಿ ಎರಡು ನೇರ ಸೆಟ್ ಗಳಿಂದ ಮಣಿಸಿರುವ ಪಿವಿ ಸಿಂಧು, ಫೈನಲ್ ಪ್ರವೇಶಿಸಿದ್ದು, ಭಾರತಕ್ಕೆ ರಿಯೋ ಒಲಂಪಿಕ್ಸ್ ನಲ್ಲಿ ಚಿನ್ನ ಅಥವಾ ಬೆಳ್ಳಿ ಪದಕ ಸಿಗುವುದು ಖಾತ್ರಿಯಾಗಿದೆ.
ಪಿವಿ ಸಿಂಧು ಅವರು ಪ್ರೀ ಕ್ವಾರ್ಟರ್ ಫೈನಲ್, ಕ್ವಾರ್ಟರ್ ಫೈನಲ್ ಹಾಗೂ ಸೆಮಿಫೈನಲ್ ಹೋರಾಟಗಳನ್ನು 2 ಸೆಟ್ ಗೆ ಮುಗಿಸಿದ್ದು ವಿಶೇಷವಾಗಿದ್ದು, ಪಿವಿ ಸಿಂಧು ಫೈನಲ್ ನಲ್ಲಿ ಸ್ಪೇನ್ ನ ಕರೊಲಿನಾ ಮರೀನ್ ಜತೆ ಸೆಣೆಸಲಿದ್ದಾರೆ. ಫೈನಲ್ ಪ್ರವೇಶಿಸಿರುವ ಸಿಂಧು ಅವರಿಗೆ ಗಣ್ಯರಿಂದ ಅಭಿನಂದನೆಯ ಮಹಾಪೂರ ಹರಿದುಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪಿವಿ ಸಿಂಧುಗೆ ಅಭಿನಂದನೆ ಸಲ್ಲಿಸಿದ್ದು, ಫೈನಲ್ ಪಂದ್ಯಕ್ಕೆ ಶುಭಹಾರೈಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics