ನವದೆಹಲಿ: ರಿಯೋ ಒಲಿಂಪಿಕ್ಸ್ ನ ಬ್ಮಾಡ್ಮಿಂಟನ್ ನಲ್ಲಿ ಭಾರತದ ಪರ ಬೆಳ್ಳಿ ಪದಕ ಗೆದ್ದಿದ್ದ ಪಿವಿ ಸಿಂಧು ಯಾವ ಜಾತಿ ಎಂಬುದನ್ನು ತಿಳಿಯಲು ಗೂಗಲ್ ನಲ್ಲಿ ಭಾರೀ ಹುಡುಕಾಟ ನಡೆದಿದೆ.
ಸೆಮಿಫೈನಲ್ ನಲ್ಲಿ ಸಿಂಧು ಗೆಲುವು ಸಾಧಿಸಿದ ಬಳಿಕ ಗೂಗಲ್ ನಲ್ಲಿ ಸಿಂಧು ಜಾತಿ ಕುರಿತು ಇದ್ದಕ್ಕಿದಂತೆ ಹುಡುಕಾಟ ಆರಂಭವಾಗಿದೆ. ಅಂಕಿ ಸಂಖ್ಯೆಗಳ ಪ್ರಕಾರ ಸರಿಸುಮಾರು 9 ಲಕ್ಷಕ್ಕೂ ಅಧಿಕ ಮಂದಿ ಸಿಂಧು ಜಾತಿ ಕುರಿತಂತೆ ಹುಡುಕಾಟ ನಡೆಸಿದ್ದಾರೆ.
ರಿಯೋ ನಲ್ಲಿ ಸಿಂಧು ಬೆಳ್ಳಿ ಪದಕ ಗೆಲ್ಲುತ್ತಿದ್ದಂತೆ ಆಕೆಯ ಗೆಲುವಿನ ಶ್ರೇಯಸ್ಸನ್ನು ತಮ್ಮದಾಗಿಸಿಕೊಳ್ಳಲು ತೆಲಂಗಾಣ ಮತ್ತು ಆಂಧ್ರಪ್ರದೇಶ ಜನರು ಬಾರೀ ಹುಡುಕಾಟ ನಡೆಸಿದ್ದಾರೆ.