ರಿಯೋ ಡಿ ಜನೈರೋ: ಒಲಿಂಪಿಕ್ಸ್ ನಲ್ಲಿ ಟ್ರಿಪಲ್ ಟ್ರಿಪಲ್ ಸ್ವರ್ಣ ಸಾಧನೆಯೊಂದಿಗೆ ಇತಿಹಾಸ ನಿರ್ಮಿಸಿರುವ ಜಮೈಕಾ ಸ್ಟಾರ್ ಸ್ಟ್ರಿಂಟರ್ ಉಸೇನ್ ಬೋಲ್ಟ್ ಇದೀಗ ಹೊಸ ವಿವಾದಕ್ಕೀಡಾಗಿದ್ದಾರೆ.
ರಿಯೋ ಒಲಿಂಪಿಕ್ಸ್ ಗೆ ಭಾನುವಾರ ಅದ್ಧೂರಿ ತೆರೆ ಬಿದ್ದಿತ್ತು, ಈ ಇದೇ ದಿನ ಉಸೇನ್ ಬೋಲ್ಟ್ ತಮ್ಮ 30ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಅದು ರಿಯೋ ವಿದ್ಯಾರ್ಥಿನಿ 20 ವರ್ಷದ ತರುಣಿ ಜತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ತಾವಿಬ್ಬರು ಹಾಸಿಗೆ ಮೇಲೆ ಮಲಗಿರುವ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಉಸೇನ್ ಬೋಲ್ಟ್ ಜತೆ ಇದ್ದ ಯುವತಿಯನ್ನು ಜಾಡಿ ಡಾರ್ಟೆ ಎಂದು ಹೇಳಲಾಗುತ್ತಿದ್ದು ಸಾಮಾಜಿಕ ಜಾಲತಾಣದಲ್ಲಿ ಈ ಸೆಲ್ಫಿಗಳು ಹರಿದಾಡುತ್ತಿದ್ದಂತೆ ಎಚ್ಚೇತ್ತ ಜಾಡಿ, ಬೋಲ್ಟ್ ವಿಶ್ವಶ್ರೇಷ್ಠ ಅಥ್ಲೀಟ್ ಎಂಬ ಅರಿವು ನನಗಿರಲಿಲ್ಲ ಎಂದಿದ್ದಾಳೆ.