ಕ್ರೀಡೆ

ಎಫ್-1 ನ ವಿಶ್ವ ಚಾಂಪಿಯನ್ ಹ್ಯಾಮಿಲ್ಟನ್ ಗೆ ದಾಖಲೆಯ ಪೆನಾಲ್ಟಿ

Srinivas Rao BV

ಸ್ಪಾ ಫ್ರಾಂಕೋರ್ಚಾಂಪ್ಸ್: ಭಾನುವಾರದಂದು ಪ್ರಾರಂಭವಾಗಲಿರುವ ಬೆಲ್ಜಿಯನ್ ಗ್ರ್ಯಾಂಡ್ ಪ್ರಿಕ್ಸ್ ನಲ್ಲಿ ಫಾರ್ಮುಲಾ ಒನ್ ನ ಲೂವಿಸ್ ಹ್ಯಾಮಿಲ್ಟನ್ ಗೆ ದಾಖಲೆಯ ಪೆನಾಲ್ಟಿ ಹಾಕಲಾಗಿದೆ.

ದಾಖಲೆಯ ಪೆನಾಲ್ಟಿ ಪರಿಣಾಮ ಗ್ರಾಂಡ್ ಪ್ರಿಕ್ಸ್ ನಲ್ಲಿ ಹ್ಯಾಮಿಲ್ಟನ್ ಗೆ 30 ನೇಯವರಾಗಿ ರೇಸ್ಪ್ರಾರಂಭಿಸಬೇಕಾಗುತ್ತದೆ. ಆದರೆ ಇದು ಈ ವಾರ ಅರ್ಹತಾ ಸುತ್ತಿಗೆ ಮಾತ್ರ ಅನ್ವಯವಾಗಲಿದೆ.

ಎರಡೂ ಅಭ್ಯಾಸ ಪಂದ್ಯಗಳಲ್ಲಿ ಫಾರ್ಮುಲಾ ಒನ್ ರೇಸ್‌ನಲ್ಲಿ ಬಳಸುವ ಮರ್ಸಿಡಿಸ್ ಬೆನ್ಜ್ ಕಾರ್ ಗೆ ಇಂಜಿನ್ ಗಳನ್ನು ಬದಲಾವಣೆ ಮಾಡಿದ್ದ ಹಾಲಿ ಚಾಂಪಿಯನ್ ಹ್ಯಾಮಿಲ್ಟನ್, ಪೆನಾಲ್ಟಿ ಹಾಕಲಾಗಿರುವುದರಿಂದ ಈಗ ಗ್ರಿಡ್ ನಲ್ಲಿ ಎಷ್ಟೇ ವೇಗವಾಗಿ ಚಲಿಸಿದರೂ ಕೊನೆಯವರಾಗಬೇಕಾಗುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.     
ಎಫ್-1 ನ ಗ್ರಿಡ್ ನಲ್ಲಿ ಕೊನೆಯವರಾಗಿ ಪ್ರಾರಂಭಿಸಿದ ಯಾರೂ ಈ ವರೆಗೂ ಗೆದ್ದಿರುವ ಉದಾಹರಣೆಗಳಿಲ್ಲ. ಈ ಹಿಂದೆ 1983 ರಲ್ಲಿ ಗೆಲುವಿನ ಸನಿಹದಲ್ಲಿದ್ದ ಉತ್ತರ ಐರ್ಲೆಂಡ್ ನ ಜಾನ್ ವಾಟ್ಸನ್ 26 ಕಾರ್ ಗಳಲ್ಲಿ 22 ನೇ ಯವರಾಗಿ ಪ್ರಾರಂಭಿಸಿದ್ದರು, ಆದರೆ ಗ್ರಿಡ್ ನಲ್ಲಿ ಕೊನೆಯವರಾಗಿ ಸ್ಪರ್ಧಿಸಿದ ಯಾರೂ ಸಹ  ಈ ವರೆಗೂ ಗೆಲುವು ಸಾಧಿಸಿಲ್ಲ.

ಫಾರ್ಮುಲಾ ರೇಸ್ ನಲ್ಲಿ ಓರ್ವ ಚಾಲಕನಿಗೆ ಒಂದು ಸೆಷನ್ ಗೆ ಇಂತಿಷ್ಟು ಎಂಜಿನ್ ಗಳನ್ನು ಮಾತ್ರ ಬದಲಾವಣೆ ಮಾಡುವ ಅವಕಾಶ ಇರುತ್ತದೆ. ಆದರೆ ಇತ್ತೀಚೆಗಷ್ಟೇ ಮುಕ್ತಾಯಗೊಂಡ ಸೆಷನ್ ನಲ್ಲಿ ಹ್ಯಾಮಿಲ್ಟನ್ ಕಾರ್ ನ ಇಂಜಿನ್ ನಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಮಿತಿಯನ್ನು ದಾಟಿ ಎಂಜಿನ್ ನ್ನು ಬದಲಾವಣೆ ಮಾಡಿದ್ದರು.

ವಿಶ್ವದ ದಾಖಲೆಯ ಪೆನಾಲ್ಟಿ ವಿಧಿಸಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹ್ಯಾಮಿಲ್ಟನ್ ಈ ಭಾನುವಾರದ ಫಾರ್ಮುಲಾ ಒನ್ ರೇಸ್ ಮತ್ತಷ್ಟು ಆಸಕ್ತಿದಾಯಕವಾಗಿರಲಿದೆ ಎಂದು ಹೇಳಿದ್ದಾರೆ.

SCROLL FOR NEXT