ಕ್ರೀಡೆ

ಹೆಚ್ಚು ದನದ ಮಾಂಸ ತಿಂದಿದ್ದಕ್ಕೆ ಉಸೇನ್ ಬೋಲ್ಟ್ ಗೆ ಜಾಸ್ತಿ ಪದಕ ಗಳಿಸಲು ಸಾಧ್ಯವಾಯ್ತು: ಬಿಜೆಪಿ ಎಂಪಿ

Shilpa D

ನವದೆಹಲಿ: ರಿಯೋ ಒಲಂಪಿಕ್ಸ್ ನಲ್ಲಿ 9 ಪದಕಗಳನ್ನು ಗೆದ್ದ ಉಸೇನ್ ಬೋಲ್ಟ್ ಹೆಚ್ಚು ದನದ ಮಾಂಸ ತಿಂದಿದ್ದರಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದು ದೆಹಲಿ ಬಿಜೆಪಿ ಸಂಸದ ಉದಿತ್ ರಾಜ್ ಹೇಳಿದ್ದಾರೆ.

ಒಲಿಂಪಿಕ್ಸ್‌ 100 ಮೀಟರ್ ಓಟದಲ್ಲಿ ಚಿನ್ನದ ಪದಕ ಬಾಚಿಕೊಂಡ ಜಮೈಕಾದ ಲೆಜೆಂಡ್ ಉಸೇನ್ ಬೋಲ್ಟ್ ಸಾಕಷ್ಟು ಗೋಮಾಂಸ ಸೇವಿಸುವುದು ಅವರ ಅದ್ಭುತ ಯಶಸ್ಸಿನ ಹಿಂದಿನ ಗುಟ್ಟು ಎಂದು ಬಿಜೆಪಿ ಸಂಸದ ಉದಿತ್ ರಾಜ್ ಹೇಳಿದರು.  ಸಾಮಾಜಿಕ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟರ್‌ನಲ್ಲಿ ಉದಿತ್ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
 
ಜಗತ್ತಿನ ಅತಿ ವೇಗದ ಓಟಗಾರ ಉಸೇನ್ ಬೋಲ್ಟ್ ತುಂಬಾ ಬಡವರಾಗಿದ್ದು, ಅವರ ಕೋಚ್ ಗೋಮಾಂಸ ಸೇವಿಸುವಂತೆ ಬೋಲ್ಟ್‌ಗೆ ಸಲಹೆ ಮಾಡಿದ್ದರು. ಅವರ ಸಲಹೆಯನ್ನು ಬೋಲ್ಟ್ ಅನುಷ್ಠಾನಕ್ಕೆ ತಂದ ಬಳಿಕ ಅತೀ ದೊಡ್ಡ ಕ್ರೀಡಾವೈಭವ ಒಲಿಂಪಿಕ್ಸ್‌ನಲ್ಲಿ ಅವರು ಪದಕಗಳನ್ನು ಗೆಲ್ಲಲಾರಂಭಿಸಿದರು ಎಂದು ದೆಹಲಿಯ ಸಂಸದರಾದ ಉದಿತ್ ರಾಜ್ ಹೇಳಿದ್ದಾರೆ.

SCROLL FOR NEXT