ಮಹೇಶ್ ಭೂಪತಿ ಮತ್ತು ಲಿಯಾಂಡರ್ ಪೇಸ್ 
ಕ್ರೀಡೆ

ರಿಯೋ ಒಲಂಪಿಕ್ಸ್: ಲಿಯಾಂಡರ್ ಪೇಸ್ ಸಿದ್ಧತೆ ನಡೆಸದೇ ಹೋಗಿದ್ದು ಅಕ್ಷಮ್ಯ, ಮಹೇಶ್ ಭೂಪತಿ

ರಿಯೋ ಒಲಂಪಿಕ್ಸ್ ನ ಡಬಲ್ಸ್ ನಲ್ಲಿ ಸೋತ ತಮ್ಮ ಮಾಜಿ ಪಾರ್ಟನರ್ ಲಿಯಾಂಡರ್ ಫೇಸ್ ವಿರುದ್ಧ ಮಹೇಶ್ ಭೂಪತಿ ಹರಿಹಾಯ್ದಿದ್ದಾರೆ...

ನವದೆಹಲಿ: ರಿಯೋ ಒಲಂಪಿಕ್ಸ್ ನ ಡಬಲ್ಸ್ ನಲ್ಲಿ ಸೋತ ತಮ್ಮ ಮಾಜಿ ಪಾರ್ಟನರ್ ಲಿಯಾಂಡರ್ ಫೇಸ್ ವಿರುದ್ಧ ಮಹೇಶ್ ಭೂಪತಿ ಹರಿಹಾಯ್ದಿದ್ದಾರೆ.

ಲಿಯಾಂಡರ್ ಪೇಸ್ ಮತ್ತು ರೋಹನ್ ಬೋಪಣ್ಣ ಅವರು ಜೊತೆಯಾಗಿ ಯಾವುದೇ ಪಂದ್ಯ ಆಡದೇ ಮತ್ತು ಅಭ್ಯಾಸವನ್ನೂ ಮಾಡದೇ ಒಲಿಂಪಿಕ್ಸ್‌ಗೆ ಹೋಗಿದ್ದು ಹಿನ್ನಡೆಗೆ ಕಾರಣವಾಯಿತು ಎಂದು ಹೇಳಿದ್ದಾರೆ.

ಒಲಿಂಪಿಕ್ಸ್‌ಗೆ ಪುರುಷರ ಡಬಲ್ಸ್ ತಂಡವು ಸಂಪೂರ್ಣ ಸಿದ್ಧತೆಯಿಂದ ಹೋಗಿರಲಿಲ್ಲ. 2004 ಮತ್ತು 2008ರ ಒಲಿಂಪಿಕ್ಸ್‌ಗಳ ಸಂದರ್ಭದಲ್ಲಿ ನಾನು ಮತ್ತು ಪೇಸ್ ಜೊತೆಗೂಡಿ ಅಭ್ಯಾಸ ಮಾಡಿರಲಿಲ್ಲ. ಆದರೆ, ಒಲಿಂಪಿಕ್ಸ್‌ಗೆ ಹೋಗುವ ಮುನ್ನ ಇಬ್ಬರೂ ಜೊತೆ ಯಾಗಿ ಕೆಲವು ಟೂರ್ನಿಗಳಲ್ಲಿ ಆಡಿದ್ದೆವು ಎಂದು ಭೂಪತಿ ನೆನಪಿಸಿಕೊಂಡರು.

ನಾನು ಮತ್ತು ಪೇಸ್ ಜೊತೆಗೂಡಿ ಎಟಿಪಿ ಟೂರ್‌ಗಳಲ್ಲಿ  ಮುನ್ನೂರು  ಡಬಲ್ಸ್‌ ಪಂದ್ಯಗಳಲ್ಲಿ ಗೆದ್ದಿದ್ದೇವೆ.  ಆದರೆ, ರೋಹನ್ ಮತ್ತು ಪೇಸ್ ಒಲಿಂಪಿಕ್ಸ್‌ಗೂ ಮುನ್ನ ಡೇವಿಸ್‌ ಕಪ್‌ ಟೂರ್ನಿಯಲ್ಲಿ ಆಡಿದ್ದು ಒಂದೇ ಪಂದ್ಯ.

ಮಿಶ್ರ ಡಬಲ್ಸ್‌ನಲ್ಲಿ ಪದಕ ಸಾಧನೆ ಸಾಧ್ಯವಿತ್ತು.  ಆದರೆ, ಪದಕದ ಸನಿಹ ಬಂದಿದ್ದ ಜೋಡಿಗೆ ದುರದೃಷ್ಟ ಕಾಡಿತ್ತು ಎಂದು 42 ವರ್ಷದ ಭೂಪತಿ ಅಭಿಪ್ರಾಯಪಟ್ಟರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

IPL 2026: ಬರೊಬ್ಬರಿ 40 ಮಿಲಿಯನ್ ಫಾಲೋವರ್ಸ್ ಇದ್ದ Insta ಖಾತೆ ಡಿಲೀಟ್ ಮಾಡಿದ Hardik Pandya

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

SCROLL FOR NEXT