ಮೊಂಟೆವೀಡಿಯೋ(ಬ್ರೆಜಿಲ್): ಬ್ರೆಜಿಲ್ ನ ಶಾಪೆಕೊಯೆನ್ಸ್ ರಿಯಲ್ ತಂಡದ ಆಟಗಾರರು ಇತ್ತೀಚೆಗಷ್ಟೇ ವಿಮಾನ ಅಪಘಾತದಲ್ಲಿ ಸಾವಿಗೀಡಾದ ಹಿನ್ನೆಲೆಯಲ್ಲಿ ಕೋಪಾ ಸೌಥ್ ಅಮೆರಿಕನ್ ಕಪ್ ಚಾಂಪಿಯನ್ಸ್ ಎಂದು ಘೋಷಿಸಲಾಗಿದೆ.
ಕೋಪಾ ಸೌಥ್ ಅಮೆರಿಕ ಕಪ್ ಟೂರ್ನಿಗಾಗಿ ಶಾಪೆಕೋಯೆನ್ಸ್ ತಂಡ ತೆರಳುತ್ತಿದ್ದಾಗ ವಿಮಾನ ದುರಂತ ಸಂಭವಿಸಿತ್ತು. ದುರಂತ ಅಂತ್ಯ ಕಂಡ ಆಟಗಾರರಿಗೆ ಗೌರವ ಸಲ್ಲಿಸುವ ಉದ್ದೇಶದಿಂದಾಗಿ ಮರಣೋತ್ತರವಾಗಿ ಚಾಂಪಿಯನ್ಸ್ ಎಂದು ಘೋಷಿಸಲಾಗಿದೆ ಎಂದು ಕೂಟದ ಸಂಘಟಕರು ತಿಳಿಸಿದ್ದಾರೆ.
ಚಾಂಪಿಯನ್ಸ್ ಶಾಪೆಕೊಯೆನ್ಸ್ ತಂಡ ಒಟ್ಟು 13.57 ಕೋಟಿ ರುಪಾಯಿ ನಗದು ಬಹುಮಾನ ಪಡೆದಿದೆ.