ದುಬೈ: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಬಿಡಬ್ಲುಎಫ್ ವಿಶ್ವ ಸೂಪರ್ ಸೀರೀಸ್ ಫೈನಲ್ ನ ಮೊದಲ ಸುತ್ತಿನ ಪಂದ್ಯದಲ್ಲಿ ಜಯ ಗಳಿಸಿದ್ದಾರೆ.
ಬುಧವಾರ ನಡೆದ ಮಹಿಳೆಯರ ಬಿ ಗುಂಪಿನ ಸಿಂಗಲ್ಸ್ ನಲ್ಲಿ ಜಪಾನ್ ಮೂಲದ 8ನೇ ಶ್ರೇಯಾಂಕದ ಆಟಗಾರ್ತಿ ಅಕಾನೆ ಯಾಮಗುಚಿರನ್ನು 12-21, 21-8, 21-15 ನೇರ ಸೆಟ್ ಗಳಿಂದ ಜಯ ಗಳಿಸಿದ್ದಾರೆ.
ಟೂರ್ನಿಯಲ್ಲಿ ಅಗ್ರ 8 ಆಟಗಾರರಿಗೆ ಮಾತ್ರ ಪ್ರವೇಶ ನೀಡಲಾಗಿದ್ದು, ಸಿಂಧು ಭಾರತದಿಂದ ಅವಕಾಶ ಪಡೆದ ಏಕೈಕ ಆಟಗಾರ್ತಿಯಾಗಿದ್ದಾರೆ.