ಮುಂಬೈ: 2016ರ ಕ್ರೀಡಾ ಪ್ರಯಾಣ ಅತ್ಯುತ್ತಮವಾಗಿತ್ತು. ಮುಂದಿನ ವರ್ಷ ವಿಶ್ವ ನಂ.1 ಪಟ್ಟಕ್ಕೇರುವ ಗುರಿ ಇದೆ ಎಂದು ರಿಯೋ ಒಪಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು ಹೇಳಿದ್ದಾರೆ.
ಖಾಸಗಿ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಪಿವಿ ಸಿಂಧು ಒಲಿಂಪಿಕ್ಸ್ ನಂತಹ ದೊಡ್ಡ ಕ್ರೀಡಾಕೂಟಗಳಲ್ಲಿ ಪದಕ ಜಯಿಸಿದ್ದು ಸೂಪರ್ ಸಿರೀಸ್ ಸ್ವರ್ಣ ಸೇರಿದಂತೆ ಹಲವು ಸಾಧನೆಗಳಿಗೆ ಈ ವರ್ಷ ಸಾಕ್ಷಿಯಾಯಿತು ಎಂದರು.
ಸದ್ಯ ಬ್ಯಾಂಡ್ಮಿಟನ್ ನಲ್ಲಿ ಆರನೇ ಸ್ಥಾನದಲ್ಲಿರುವುದು ಸಂತಸ ಸಂಗತಿ. ಮುಂದಿನ ದಿನಗಳಲ್ಲಿ ಮತ್ತಷ್ಟು ಸುಧಾರಣೆಯನ್ನು ಸಾಧಿಸಿ ಮುಂದಿನ ವರ್ಷ ವಿಶ್ವದ ನಂಬರ್ 1 ಆಟಗಾರ್ತಿಯಾಗುವ ಗುರಿ ಹೊಂದಿದ್ದೇನೆ ಎಂದರು.