ಸ್ಟಾರ್ ಫುಟ್ಬಾಲಿಗ ಕ್ರಿಶ್ಚಿಯಾನೊ ರೊನಾಲ್ಡೊ ಬರೋಬ್ಬರಿ 2 ಸಾವಿರ ಕೋಟಿ ಆಫರ್ ನಿರಾಕರಿಸಿದ್ದರಾ?
ಚೀನಾದ ಸೂಪರ್ ಲೀಗ್ ನ ಕ್ಲಬ್ ತಂಡದಿಂದ ಬಂದಿದ್ದ 2.158 ಕೋಟಿ ರುಪಾಯಿ ಆಫರ್ ಅನ್ನು ರಿಯಲ್ ಮ್ಯಾಡ್ರಿಡ್ ಕ್ಲಬ್ ನ ಸ್ಟಾರ್ ಸ್ಟೈಕರ್ ಪೋರ್ಚುಗಲ್...
ಮ್ಯಾಡ್ರಿಡ್: ಚೀನಾದ ಸೂಪರ್ ಲೀಗ್ ನ ಕ್ಲಬ್ ತಂಡದಿಂದ ಬಂದಿದ್ದ 2.158 ಕೋಟಿ ರುಪಾಯಿ ಆಫರ್ ಅನ್ನು ರಿಯಲ್ ಮ್ಯಾಡ್ರಿಡ್ ಕ್ಲಬ್ ನ ಸ್ಟಾರ್ ಸ್ಟೈಕರ್ ಪೋರ್ಚುಗಲ್ ಕ್ರಿಶ್ಚಿಯಾನೊ ರೊನಾಲ್ಡೊ ನಿರಾಕರಿಸಿದ್ದರಂತೆ ಹೀಗಂತ ರೊನಾಲ್ಡೊರ ಏಜೆಂಟ್ ಜಾರ್ಜ್ ಮೆಂಡಿಸ್ ಹೇಳಿದ್ದಾರೆ.
ಜಾರ್ಜ್ ಮೆಂಡಿಸ್ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಚೀನಾದ ಫುಟ್ಬಾಲ್ ಕ್ಲಬ್ ಒಂದು ರೊನಾಲ್ಡೊ ಅವರನ್ನು ತಂಡಕ್ಕೆ ಆಯ್ದುಕೊಳ್ಳಲು ಉತ್ಸುಕವಾಗಿತ್ತು. ಆದರೆ ಹಣವೇ ಎಲ್ಲವೂ ಅಲ್ಲ. ರಿಯಲ್ ಮ್ಯಾಡ್ರಿಡ್ ಕ್ಲಬ್ ಜತೆ ನನ್ನ ಜೀವವಿದೆ. ತಾವು ಈ ಕ್ಲಬ್ ನಲ್ಲಿ ಸಂತೋಷದಿಂದ ಇರುವುದಾಗಿ ಹೇಳಿ ರೊನಾಲ್ಡೊ ಆಫರ್ ಅನ್ನು ನಿರಾಕರಿಸಿದ್ದರು ಎಂದು ತಿಳಿಸಿದ್ದಾರೆ.
ಕಳೆದ ಬೇಸಿಗೆಯಲ್ಲಿ ಪೌಲ್ ಪೋಗ್ಬಾರ ತಂಡಕ್ಕೆ ಸೇರಿಸಿಕೊಳ್ಳುವ ಸಲುವಾಗಿ ಮ್ಯಾಂಚೆಸ್ಟರ್ ಯುನೈಟೆಡ್ ತಂಡ ಜುವೆಂಟಸ್ ಕ್ಲಬ್ ಗೆ 751 ಕೋಟಿ ರುಪಾಯಿ ಅನ್ನು ವರ್ಗಾವಣೆ ಮೊತ್ತವನ್ನಾಗಿ ನೀಡಿದ್ದು ದಾಖಲೆ ಎನಿಸಿದೆ.