ಹಿರಿಯ ಕ್ರಿಕೆಟಿಗ ಇಸ್ರಾರ್ ಅಲಿ
ಕರಾಚಿ: ಪಾಕಿಸ್ತಾನದ ಮಾಜಿ ಹಾಗೂ ಏಕೈಕ ಹಿರಿಯ ಕ್ರಿಕೆಟಿಗ ಇಸ್ರಾರ್ ಅಲಿ ನಿಧನರಾಗಿದ್ದಾರೆ.
88 ವರ್ಷದ ಇಸ್ರಾರ್ ಅಲಿ ಪಂಜಾಬ್ ಪ್ರಾಂತ್ಯದ ಒಕರಾದಲ್ಲಿನ ತಮ್ಮ ನಿವಾಸದಲ್ಲಿ ನಿಧನರಾಗಿದ್ದೆರೆಂದು ವರದಿಯಾಗಿದೆ.
1927ರ, ಮೇ1ರಂದು ಭಾರತದ ಜಲಂಧರ್ ನಲ್ಲಿ ಜನಿಸಿದ್ದ ಇಸ್ರಾರ್ ಅಲಿ ಓರ್ವ ಆಲ್ರೌಂಡ್ ಕ್ರಿಕೆಟಿಗ. 1952ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ಪಾಕ್ ತಂಡದಲ್ಲಿ ಇಸ್ರಾರ್ ಕೂಡ ಸ್ಥಾನ ಪಡೆದಿದ್ದರು.
ಅಂತೆಯೇ 60 ವರ್ಷಗಳ ಹಿಂದೆ ಪಾಕಿಸ್ತಾನ ಆಡಿದ ಮೊದಲ ಟೆಸ್ಟ್ ತಂಡದಲ್ಲೂ ಇಸ್ರಾರ್ ಇದ್ದರು. 1946-47ರಲ್ಲಿ ಭಾರತ ದೇಶ ಇಬ್ಭಾಗವಾಗುವ ಮುನ್ನವೇ ಇಸ್ರಾರ್ ಕ್ರಿಕೆಟ್ ಜೀವನ ಆರಂಭಿಸಿದ್ದರು.
40 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಇಸ್ರಾರ್, 22.63ರ ಸರಾಸರಿಯಲ್ಲಿ 114 ವಿಕೆಟ್ ಮತ್ತು 20.54ರ ಸರಾಸರಿಯಲ್ಲಿ 1,130 ರನ್ ಗಳಿಸಿದ್ದರು. ಆಗಿನ ಪಾಕ್ ತಂಡತದ ನಾಯಕ ಅಬ್ದುಲ್ ಕರ್ದಾರ್ ಜತೆಗಿನ ವೈಮನಸ್ಸಿನಿಂದಾಗಿ ಇಸ್ರಾರ್ ವೃತ್ತಿ ಬದುಕಿನಿಂದ ಹಠಾತ್ ಹಿಂದೆ ಸರಿದರೆಂಬ ಮಾತು ಕ್ರಿಕೆಟ್ ವಲಯದಲ್ಲಿರುವ ಮಾತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics