ಕ್ರೀಡೆ

ದಕ್ಷಿಣ ಏಷ್ಯಾ ಕ್ರೀಡಾಕೂಟ: ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರ ಸ್ಪರ್ಧೆ

Sumana Upadhyaya

ಗುವಾಹಟಿ: ಇಲ್ಲಿ ಆರಂಭಗೊಂಡಿರುವ 12ನೇ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಶನಿವಾರ ಭಾರತದ ಕ್ರೀಡಾಪಟುಗಳು ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ.

ವೈಟ್ ಲಿಫ್ಟಿಂಗ್, ಕುಸ್ತಿ, ಬಿಲ್ಲುಗಾರಿಕೆ, ಬ್ಯಾಡ್ಮಿಂಟನ್, ಸ್ಕ್ವಾಷ್, ಟೇಬಲ್ ಟೆನ್ನಿಸ್, ಈಜು, ಫುಟ್ಬಾಲ್, ಖೋ-ಖೋ ಮತ್ತು ವಾಲಿಬಾಲ್ ಕ್ರೀಡೆಗಳಲ್ಲಿ ಭಾರತೀಯರು ಕಾಣಿಸಿಕೊಳ್ಳಲಿದ್ದಾರೆ.

ಸಾರುಸಜಾಯಿ ಕ್ರೀಡಾ ಸಂಕೀರ್ಣದಲ್ಲಿರುವ ಇಂದಿರಾ ಗಾಂಧಿ ಅಥ್ಲೆಟಿಕ್ಸ್ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಭವ್ಯ ಸಮಾರಂಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ದಕ್ಷಿಣ ಏಷ್ಯಾ ಕ್ರೀಡಾಕೂಟಕ್ಕೆ ಚಾಲನೆ ನೀಡಿದ್ದರು.

ಉದ್ಘಾಟನೆ ಸಮಾರಂಭದಲ್ಲಿ ಈಶಾನ್ಯ ಪ್ರಾಂತ್ಯದ ಶ್ರೀಮಂತ ಮತ್ತು ವೈವಿಧ್ಯಮಯ ಸಂಸ್ಕೃತಿ ಅನಾವರಣಗೊಂಡಿತ್ತು. ಕ್ರೀಡಾಪಟುಗಳ ಪಥ ಸಂಚಲನ, ಕ್ರೀಡಾ ಜ್ಯೋತಿಯ ರಿಲೆ, ವರ್ಣಮಯ ನೃತ್ಯ ಪ್ರದರ್ಶನಗಳು ಗಮನ ಸೆಳೆಯುವ ಮೂಲಕ ಭಾರತದ ಶ್ರೀಮಂತ ಪರಂಪರೆ ಬೆಳಗುವಂತೆ ಮಾಡಿತ್ತು.

SCROLL FOR NEXT