ಕ್ರೀಡೆ

ತುಂಡುಡುಗೆ ತೊಟ್ಟ ಭಾರತೀಯ ನಿರೂಪಕಿ ಜೊತೆ ಸಂದರ್ಶನ ನಿರಾಕರಿಸಿದ ಹಶೀಮ್ ಆಮ್ಲಾ

Vishwanath S

ನವದೆಹಲಿ: ತುಂಡುಡುಗೆ ತೊಟ್ಟಿದ್ದ ಕಾರಣಕ್ಕಾಗಿ ಭಾರತದ ನಿರೂಪಕಿ ಜತೆ ಸಂದರ್ಶನ ನಿರಾಕರಿಸಿ ದಕ್ಷಿಣ ಆಫ್ರಿಕಾ ತಂಡದ ಮಾಜಿ ಟೆಸ್ಟ್‌ ನಾಯಕ ಹಾಶಿಮ್‌ ಆಮ್ಲಾ ಅವರು ಸುದ್ದಿಯಾಗಿದ್ದಾರೆ.

ತುಂಡುಡುಗೆ ಮತ್ತು ಕಡಿಮೆ ಕುತ್ತಿಗೆ ಯ ಟಾಪ್‌ ನೋಡಿ ಆಕೆಯೊಂದಿಗೆ ಸಂದರ್ಶನದಲ್ಲಿ ಭಾಗಿಯಾಗಲು 32 ರ ಹರೆಯದ ಆಮ್ಲಾ ನಿರಾಕರಿಸಿದ್ದಾರೆ. ಸಂಘಟಕರ ಬಳಿ ಆಕೆ ಸಭ್ಯ ಉಡುಪು ಧರಿಸಿ ಬಂದರಷ್ಟೆ ಸಂದರ್ಶನ ನೀಡುವುದಾಗಿ ಎಬಿಪಿ ಲೈವ್‌ ವರದಿ ಮಾಡಿದೆ.

ಕಟ್ಟಾ ಇಸ್ಲಾಂನ ಅನುಯಾಯಿಯಾಗಿರುವ ಆಮ್ಲಾ ಈ ಹಿಂದೆ ತಂಡದ ಜೆರ್ಸಿಯಲ್ಲಿ ಕ್ಯಾಟಲ್‌ ಬೀಯರ್‌ ಜಾಹಿರಾತನ್ನು ಪ್ರಕಟಿಸುವುದನ್ನು ವಿರೋಧಿಸಿದ್ದರು.

SCROLL FOR NEXT