ಬೆಂಗಳೂರು ವರ್ಸಸ್ ಮತ್ತು ತೆಲುಗು ಟೈಟಾನ್ಸ್ 
ಕ್ರೀಡೆ

ಪ್ರೊ ಕಬಡ್ಡಿ: ಬೆ೦ಗಳೂರು ಬುಲ್ಸ್ ಗೆ ಹೀನಾಯ ಸೋಲು

ತವರು ನೆಲದ ಬೆಂಬಲದ ಮಧ್ಯೆಯೂ ಹಾಲಿ ರನ್ನರ್ ಅಪ್ ಬೆಂಗಳೂರು ಬುಲ್ಸ್ ತಂಡ 3ನೇ ಪ್ರೊ ಕಬಡ್ಡಿ ಲೀಗ್ ನಲ್ಲಿ ಸೋಲನ್ನು ಅನುಭವಿಸಿತು...

ಬೆ೦ಗಳೂರು: ತವರು ನೆಲದ ಬೆಂಬಲದ ಮಧ್ಯೆಯೂ ಹಾಲಿ ರನ್ನರ್ ಅಪ್ ಬೆಂಗಳೂರು ಬುಲ್ಸ್ ತಂಡ 3ನೇ ಪ್ರೊ ಕಬಡ್ಡಿ ಲೀಗ್ ನಲ್ಲಿ ಸೋಲನ್ನು ಅನುಭವಿಸಿತು.

ಈ ಹಿಂದಿನ ಪಂದ್ಯದಲ್ಲಿ ಜೈಪುರ ತಂಡವನ್ನು ಮಣಿಸಿದ್ದ ಬೆಂಗಳೂರು ತಂಡ ಅದೇ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿದಿತ್ತು. ಆದರೆ ಅಂತಿಮ ಅವಧಿಯವರೆಗೂ ಬೆಂಗಳೂರು ತಂಡಕ್ಕೆ ತೀವ್ರ  ಹೋರಾಟ ನೀಡಿದ ತೆಲುಗು ಟೈಟನ್ಸ್ ತಂಡ ಅಂತಿಮವಾಗಿ ಬೆಂಗಳೂರು ತಂಡವನ್ನು ಮಣಿಸಿತು.

ಬಲಿಷ್ಠ ಆಟಗಾರರ ಪಡೆಯಿದ್ದ ತೆಲುಗು ಟೈಟಾನ್ಸ್ ತ೦ಡದ ವಿರುದ್ಧ ಬೆಂಗಳೂರು ಬುಲ್ಸ್ ತಂಡ 26-35 ಪಾಯಿ೦ಟ್‍ಗಳಿ೦ದ ಶರಣಾಯಿತು. ಕ೦ಠೀರವ ಕ್ರೀಡಾ೦ಗಣದಲ್ಲಿ ನಡೆದ 2ನೇ  ಪ೦ದ್ಯದಲ್ಲಿ ಪ್ರಥಮಾಧ೯ ಅವಧಿಯ ಹಿನ್ನಡೆಯೊ೦ದಿಗೆ ಕಣಕ್ಕಿಳಿದ ಬುಲ್ಸ್ ದ್ವಿತೀಯಾರ್ಧ ಅವಧಿಯಲ್ಲಿ ಪ್ರತಿ ಹೋರಾಟ ನೀಡಿದರೂ ತೆಲುಗು ಟೈಟಾನ್ಸ್ ನ ಬಲಿಷ್ಠ ಕ್ಯಾಚಿ೦ಗ್‍ಗೆ ಸುಲಭವಾಗಿ  ಶರಣಾಯಿತು. 30ನೇ ನಿಮಿಷದಲ್ಲಿ 19-30ರ ಹಿನ್ನಡೆಯಲ್ಲಿದ್ದ ಬುಲ್ಸ್ ಬಳಿಕ ಪುಟಿದೆದ್ದು, 38ನೇ ನಿಮಿಷದಲ್ಲಿ ಅ೦ಕವನ್ನು 26-33ಕ್ಕಿಳಿಸಿ ತಿರುಗೇಟು ನೀಡುವ ಸೂಚನೆ ನೀಡಿತ್ತು.

ಆದರೆ ಈ ಹಂತದಲ್ಲಿ ರೈಡಿಂಗ್ ಗೆ ಆಗಮಿಸಿದ ಟೈಟಾನ್ಸ್ ತಂಡದ ಸ್ಟಾರ್ ರೈಡರ್ ಗಳಾದ ರಾಹುಲ್ ಚೌಧರಿ (11 ಅಂಕ), ಸುಖೇಶ್ ಹೆಗ್ಡೆ(4 ಅಂಕ) ಅವರು ಬೆಂಗಳೂರು ಬುಲ್ಸ್ ತಂಡದ  ಜಯದ ಕನಸನ್ನು ಕಸಿದರು. ಬಲಿಷ್ಠ ರೈಡಿ೦ಗ್ ಮತ್ತು ಸ೦ಘಟಿತ ನಿವ೯ಹಣೆ ತೋರಿದ ಟೈಟನ್ಸ್ ಎದುರು ಮ೦ಕಾದ ಬುಲ್ಸ್ ಅಂತಿಮವಾಗಿ ಸೋಲೊಪ್ಪಿಕೊಂಡಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT