ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ
ನವದೆಹೆಲಿ: ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಬ್ರೇಕಪ್ ಆಗಿರುವ ವಿಷಯ ಎಲ್ಲರಿಗೂ ಗೊತ್ತೇ ಇದೆ. ಆದರೆ ಈ ಬ್ರೇಕಪ್‌ಗೆ ಕಾರಣ ಏನು ಎಂಬುದನ್ನೂ ವಿರಾಟ್ ಕೊಹ್ಲಿ ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ನಡುವೆ ಬ್ರೇಕಪ್ ಆಗಿರುವ ವಿಷಯ ಸೋಮವಾರ ಅಧಿಕೃತವಾಗಿದ್ದರೂ ಇದಕ್ಕಿಂತ ಮುಂಚೆಯೇ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡಿತ್ತು ಎಂದು ಹೇಳಲಾಗುತ್ತಿದೆ.
ಇತ್ತೀಚೆಗೆ ನಟ ಅಂಗದ್ ಬೇಡಿ ಅವರ ಬರ್ತ್‌ಡೇ ಪಾರ್ಟಿ ಮುಂಬೈನ ನೈಟ್ ಕ್ಲಬ್‌ನಲ್ಲಿ ನಡೆದಿತ್ತು. ಆ ಪಾರ್ಟಿಯಲ್ಲಿ ಸಿಕ್ಕಾಪಟ್ಟೆ ಡ್ಯಾನ್ಸ್ ಮಾಡಿದ್ದ ವಿರಾಟ್, ನಾನು ಸಿಂಗಲ್..ಬನ್ನಿ ನನ್ನೊಂದಿಗೆ ಡ್ಯಾನ್ಸ್ ಮಾಡಿ ಎಂದು ಅತಿಥಿಗಳನ್ನು ಆಹ್ವಾನಿಸುತ್ತಿದ್ದರಂತೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಅಷ್ಟೇ ಅಲ್ಲ ಆಕೆ (ಅನುಷ್ಕಾ) ತನ್ನನ್ನು ನಿಯಂತ್ರಿಸುತ್ತಿದ್ದಳು ಎಂದು ಹೇಳಿರುವುದಾಗಿಯೂ ಸುದ್ದಿಯಿದೆ.
ಕ್ರಿಕೆಟ್ ನಲ್ಲಿ ಕೊಹ್ಲಿ ಮತ್ತು ಸಿನಿಮಾಗಳಲ್ಲಿ ಅನುಷ್ಕಾ ಬ್ಯುಸಿಯಾಗಿರುವ ಕಾರಣ ಇಬ್ಬರಿಗೂ ಜತೆಗೆ ಕಾಲ ಕಳೆಯಲು ಸಮಯ ಸಾಲುತ್ತಿರಲಿಲ್ಲ. ಇತ್ತ ವಿರಾಟ್ ಭಾರತ- ಶ್ರೀಲಂಕಾ ನಡುವಿನ ಟಿ20 ಸರಣಿ ಪಂದ್ಯದಲ್ಲಿ ಭಾಗವಹಿಸುತ್ತಿಲ್ಲ. ಇದಕ್ಕೆ ಕಾರಣವೂ ಇದೆ. ವ್ಯಾಲೆಂಟೈನ್ಸ್ ವಾರಾಚರಣೆಯನ್ನು ಅನುಷ್ಕಾ ಜತೆ ಆಚರಿಸುವುದಕ್ಕಾಗಿಯೇ ವಿರಾಟ್ ರಜಾ ತೆಗೆದುಕೊಂಡಿದ್ದರು. ಆದರೆ ಅನುಷ್ಕಾ ಕೊಹ್ಲಿಗೆ ಒಂದು ಮಾತೂ ಹೇಳದೆ ಸುಲ್ತಾನ್ ಚಿತ್ರದ ಶೂಟಿಂಗ್ ಹೊರಟು ಹೋಗಿ ಬಿಟ್ಟಿದ್ದರು. ಈ ವಿಷಯದಿಂದಾಗಿ ಇವರಿಬ್ಬರ ನಡುವೆ ಜಗಳವಾಗಿದೆ.
ಇಷ್ಟೇ ಅಲ್ಲದೆ, ಈ ವರ್ಷ ಮದುವೆಯಾಗಿ ಬಿಡೋಣ ಎಂದು ಕೊಹ್ಲಿ ಹೇಳಿದ್ದಾರೆ. ಅದಕ್ಕೆ ಅನುಷ್ಕಾ ನೋ, ಅಂದಿದ್ದು ಸದ್ಯ ಇಬ್ಬರೂ ತಮ್ಮ ತಮ್ಮ ವೃತ್ತಿಜೀವನದತ್ತ ಗಮನ ಹರಿಸೋಣ ಎಂದಿರುವುದೂ ಬ್ರೇಕಪ್‌ಗೆ ಕಾರಣ ಎಂದು ಹೇಳಲಾಗುತ್ತಿದೆ.
ಕೆಲವು ದಿನಗಳ ಹಿಂದೆ ಅನುಷ್ಕಾ ಮತ್ತು ವಿರಾಟ್ ಪರಸ್ಪರ ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡುವುದನ್ನು ನಿಲ್ಲಿಸಿರುವುದು ನೆಟಿಜನ್‌ಗಳ ಗಮನಕ್ಕೆ ಬಂದಿತ್ತು. ಬ್ರೇಕಪ್ ಅಧಿಕೃತವಾದ ಮೇಲೆ ವಿರಾಟ್ ಹಾರ್ಟ್‌ಬ್ರೋಕನ್ ಎಂಬ ಶೀರ್ಷಿಕೆ ನೀಡಿ ಇನ್‌ಸ್ಟಾಗ್ರಾಂನಲ್ಲಿ ಫೋಟೋ ಹಾಕಿ ಅದನ್ನು ಡಿಲೀಟ್ ಮಾಡಿದ್ದರು. ಸ್ವಲ್ಪ ಹೊತ್ತು ಕಳೆದ ನಂತರ ನಾನು ಫೋಟೋ ಡಿಲೀಟ್ ಮಾಡಿ ತಪ್ಪು ಮಾಡಿದೆ ಎಂದು ಮತ್ತೊಮ್ಮೆ ಆ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics