ಗೆಲುವಿನ ಸಂಭ್ರಮದಲ್ಲಿ ಟೀನ್ ಇಂಡಿಯಾ 
ಕ್ರೀಡೆ

ಕಿರಿಯರ ವಿಶ್ವಕಪ್‌: ಲಂಕಾ ವಿರುದ್ಧ ಭಾರತಕ್ಕೆ ಗೆಲುವು, ಫೈನಲ್ ಗೆ ಲಗ್ಗೆಯಿಟ್ಟ ಟೀಂ ಇಂಡಿಯಾ

ಅಂಡರ್ 19 ಐಸಿಸಿ ವಿಶ್ವಕಪ್‌ ಪಂದ್ಯದ ಸೆಮಿ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಭಾರತ 97ರನ್​ಗಳ...

ಮಣಿಪುರ: ಅಂಡರ್ 19 ಐಸಿಸಿ ಕಿರಿಯರ ವಿಶ್ವಕಪ್‌ ಪಂದ್ಯದ ಸೆಮಿ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಭಾರತ 97ರನ್​ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಫೈನಲ್ ಪ್ರವೇಶಿಸಿದೆ.
ಇಂದು ಲಂಕಾ ವಿರುದ್ಧ ನಡೆದ ಸೆಮಿ ಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ, ನಾಯಕ ಇಶಾನ್ ಕಿಷನ್ ಹಾಗೂ ರಿಶಭ್ ಪಂತ್ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತ್ತು. ಆದರೆ ಮಧ್ಯಮ ಕ್ರಮಾಂಕದ ಅನ್ಮೋಲ್​ಪ್ರೀತ್ ಸಿಂಗ್ (72) ಹಾಗೂ ಸರ್ಫರಾಜ್ ಖಾನ್ (59) ತಂಡಕ್ಕೆ ನೆರವಾದರು. ಅಂತಿಮ ಓವರ್​ಗಳಲ್ಲಿ ಅರ್ವನ್ ಜಾಫರ್ ಹಾಗೂ ಮಯಾಂಕ್ ದಾಗ್ರಾ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ನಿಗದಿತ ಓವರ್​ಗೆ 267 ರನ್ ಭಾರಿಸಿತು.
ಭಾರತದ 267ರನ್ ರನ್ ಗಳ ಗುರಿ ಬೆನ್ನು ಹತ್ತಿದ ಶ್ರೀಲಂಕಾ 42.4 ಓವರ್‌ಗಳಲ್ಲಿ ತನ್ನ ಎಲ್ಲ 10 ವಿಕೆಟ್‌ಗಳನ್ನು ಕಳೆದು ಕೊಂಡು ಕೇವಲ 170 ರನ್‌ ಗಳಿಸಲಷ್ಟೇ ಶಕ್ತವಾಯಿತು ಮತ್ತು ಆ ಮೂಲಕ ಭಾರತದೆದುರು 97 ರನ್ನುಗಳ ಸೋಲು ಅನುಭವಿಸಿತು.
ಭಾರತದ ಆವೀಷ್ ಖಾನ್ ತಮ್ಮ ಕರಾರುವಾಕ್ ದಾಳಿಯಿಂದ ಆವಿಷ್ಕಾ ಫರ್ನಾಂಡೋ ವಿಕೆಟ್ ಪಡೆಯುವ ಮೂಲಕ ಮೊದಲ ಓವರ್​ನಲ್ಲೇ ಆರಂಭಿಕ ಆಘಾತ ನೀಡಿದರು. 35 ಓವರ್ ಆಗುವಷ್ಟರಲ್ಲಿ ಶ್ರೀಲಂಕಾ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಶ್ರೀಲಂಕಾ ಪರ ಯಾರು ಕೂಡ ಉತ್ತಮ ಹೋರಾಟ ನೀಡಲಿಲ್ಲ. ಪರಿಣಾಮ 42.2 ಓವರ್​ಗೆ 170 ರನ್ ಗಳಿಸುವಷ್ಟರಲ್ಲಿ ಲಂಕಾ ಸರ್ವಪತನ ಕಂಡಿತು.
ಈ ಮೂಲಕ ಭಾರತ ಐದನೆ ಭಾರಿಗೆ ಫೈನಲ್ ತಲುಪಿದ ಕೀರ್ತಿಗೆ ಭಾಜನವಾಯಿತು. ಮೂರುಭಾರಿ ಚಾಂಪಿಯನ್ ಆಗಿರುವ ಭಾರತಕ್ಕೆ ಫೆ.14ರಂದು ನಡೆಯುವ ಫೈನಲ್ ಪಂದ್ಯದಲ್ಲಿ ಎರಡನೇ ಫೈನಲಿಸ್ಟ್ ವೆಸ್ಟ್ ಇಂಡಿಸ್ ಅಥವಾ ಬಾಂಗ್ಲಾದೇಶ ಎದುರಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!

ಸರ್ಕಾರವನ್ನು ಅಸ್ಥಿರಗೊಳಿಸುವ ಪಿತೂರಿ: 'ಸ್ಟಿಂಗ್ ಆಪರೇಷನ್' ಕುರಿತು ಸಿಎಂ DKS ಎಚ್ಚರಿಕೆ ಕರೆಗೆ ಸಚಿವರಿಂದ ಬೆಂಬಲ

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ಚಿಕ್ಕಣ್ಣ, ಯಶಸ್ ಸೂರ್ಯಗೆ ಬಿಗ್ ಶಾಕ್‌; ಇಬ್ಬರಿಗೂ ಕೋರ್ಟ್ ಸಮನ್ಸ್