ಕ್ರಿಕೆಟ್ ಇತಿಹಾಸದಲ್ಲೇ ತಂಡವೊಂದು ಶೂನ್ಯಕ್ಕೆ ಆಲೌಟ್!
ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ತಂಡವೊಂದು ಶೂನ್ಯ ಮೊತ್ತಕ್ಕೆ ಆಲೌಟ್ ಆಗಿರುವ ಅಪರೂಪದ ಪ್ರಸಂಗ ನಡೆದಿದೆ...
ಮೆಲ್ಬರ್ನ್: ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ತಂಡವೊಂದು ಶೂನ್ಯ ಮೊತ್ತಕ್ಕೆ ಆಲೌಟ್ ಆಗಿರುವ ಅಪರೂಪದ ಪ್ರಸಂಗ ನಡೆದಿದೆ.
ಕ್ರೈಸ್ಟ್ ಚರ್ಚ್ ಯೂನಿವರ್ಸಿಟಿ ಹಾಗೂ ಬ್ಯಾಪ್ ಚೈಲ್ಡ್ ಕ್ರಿಕೆಟ್ ಕ್ಲಬ್ ತಂಡ ಗಳ ನಡುವೆ ಪಂದ್ಯ ನಡೆದಿತ್ತು. ಒಳಾಂಗಣ ಕ್ರೀಡೆಯಾದರಿಂದ ಪ್ರತಿ ತಂಡದಲ್ಲಿ ಆರು ಆಟಗಾರರು ಮಾತ್ರ ಇರುತ್ತಾರೆ. ಮೊದಲು ಬ್ಯಾಟ್ ಮಾಡಿದ ಕ್ರೈಸ್ಟ್ ಚರ್ಚ್ ಯೂನಿವರ್ಸಿಟಿ ತಂಡ 120 ರನ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ ನ ಬ್ಯಾಪ್ ಚೈಲ್ಡ್ ಕ್ರಿಕೆಟ್ ಕ್ಲಬ್ ತಂಡ ಯಾವುದೇ ರನ್ ಗಳಿಸಿದೆ 20 ಎಸೆತಗಳಲ್ಲಿ ಆಲೌಟ್ ಆಯಿತು.
ಕ್ರೈಸ್ಟ್ ಚರ್ಚ್ ಪರ ಫ್ರೇಸರ್ ಹಾಗೂ ಫಿಲಿಪ್ ತಲಾ 3 ವಿಕೆಟ್ ಗಳಿಸಿ, ತಂಡಕ್ಕೆ 120 ರನ್ ಗಳ ಜಯ ತಂದುಕೊಟ್ಟಿದ್ದಾರೆ.