ಅನುರಾಗ್ ಠಾಕೂರ್ 
ಕ್ರೀಡೆ

ಲೋಧಾ ಸಮಿತಿ ವರದಿ ಜಾರಿ ಸಂಬಂಧ ಸಮಸ್ಯೆ: ಸುಪ್ರೀಂಗೆ ಬಿಸಿಸಿಐ ಅಫಿಡವಿಟ್

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಇಂದು ವಿಶೇಷ ಮಹಾಸಭೆ ನಡೆಸಿ ಲೋಧಾ ಸಮಿತಿ ವರದಿ ಜಾರಿ ಸಂಬಂಧಿತ ಹಲವಾರು ಸಮಸ್ಯೆಗಳನ್ನು ಅಫಿಡವಿಟ್...

ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಇಂದು ವಿಶೇಷ ಮಹಾಸಭೆ ನಡೆಸಿ ಲೋಧಾ ಸಮಿತಿ ವರದಿ ಜಾರಿ ಸಂಬಂಧಿತ ಹಲವಾರು ಸಮಸ್ಯೆಗಳನ್ನು ಅಫಿಡವಿಟ್ ಮೂಲಕ ಸುಪ್ರೀಂಕೋರ್ಟ್ ಗಮನಕ್ಕೆ ತರಲು ನಿರ್ಧರಿಸಿದೆ.

ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಅವರು ಬಿಸಿಸಿಐ ಪರವಾಗಿ ಅಫಿಡವಿಟ್ ಸಲ್ಲಿಕೆಯ ಹೊಣೆಯನ್ನು ಹೊತ್ತಿದ್ದಾರೆ.  ಕ್ರಿಕೆಟ್ ಆಡಳಿತ ವೈಖರಿಯಲ್ಲಿ ಹಲವು ಮಹತ್ವದ ಬದಲಾವಣೆಗಳಿಗೆ ಲೋಧಾ ಸಮಿತಿ ಶಿಫಾರಸು ಮಾಡಿದೆ. ಈ ವರದಿ ಬಗ್ಗೆ ಮಂಡಳಿಯ ಸದಸ್ಯ ರಾಜ್ಯ ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿದ್ದು, ವರದಿ ಜಾರಿ ಮಾಡುವುದು ಕಷ್ಟ ಸಾಧ್ಯ ಹಾಗೂ ಇದರಿಂದ ಬಿಸಿಸಿಐಗೆ ಅಪಾರ ನಷ್ಟವಾಗಲಿದೆ ಎಂದು ಸಭೆಯ ಬಳಿಕ ಅಧಿಕಾರಿಗಳು ತಿಳಿಸಿದ್ದಾರೆ.

ಸಚಿವರು, ಸರ್ಕಾರಿ ನೌಕರರು, ಕ್ರಿಕೆಟ್ ಆಡಳಿತಾಧಿಕಾರಿಗಳಾಗಿರಬಾರದು. ಒಂದು ರಾಜ್ಯಕ್ಕೆ ಒಂದೇ ಮತ, ಉಪಹಾರ ವಿರಾಮ ಅಥವಾ ಚಹಾ ವಿರಾಮ ಇದ್ದಾಗ ಒಮ್ಮೆ ಮಾತ್ರ ಜಾಹೀರಾತು ಪ್ರದರ್ಶಿಸ ಬೇಕೆಂದು ತಿಳಿಸಿತ್ತು, ಇದರಿಂದಾಗಿ ಬಿಸಿಸಿಐಗೆ ಬರೋಬ್ಬರಿ 1500 ಕೋಟಿ ರು. ನಷ್ಟವಾಗುತ್ತಿತ್ತು. ಈ ಎಲ್ಲಾ ಕಾರಣದಿಂದ ಬಿಸಿಸಿಐ ವರದಿ ಜಾರಿ ಮಾಡಲು ಹಿಂದೇಟು ಹಾಕಿದೆ. ಈ ವರದಿಯ ಜಾರಿ ಕುರಿತು ಬಿಸಿಸಿಐ ಉತ್ತರಕ್ಕಾಗಿ ಸುಪ್ರಿಂ ಕೋರ್ಟ್ ಮಾರ್ಚ್ 3ರವರೆಗೆ ಕಾಲಾವಕಾಶ ನೀಡಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಉರ್ದು ಭಾಷೆಯಲ್ಲಿ ಸರ್ಕಾರದ ಜಾಹೀರಾತು: ಸಿಎಂ ಸಿದ್ದರಾಮಯ್ಯ ಸಮರ್ಥನೆ ಹೇಗಿದೆ ಗೊತ್ತಾ?

SCROLL FOR NEXT