ಕತಾರ್: ಟುನೀಷಿಯಾದ ವೈಲ್ಡ್ ಕಾರ್ಡ್ ಸ್ಪರ್ಧಿ ಮಾಲೆಕ್ ಜಜೀರಿ ವಿರುದ್ಧ 6-1,6-2 ಗೆಲವು ಸಾಧಿಸುವ ಮೂಲಕ ವೃತ್ತಿ ಜೀವನದ 700ನೇ ಜಯ ಗಳಿಸಿದ ಸಾಧನೆ ಮಾಡಿದ್ದ ನೊವಾಕ್ ಜೊಕೊವಿಚ್ ಇದೀಗ ಅದೇ ಟೂರ್ನಿಯಿಂದ ನಿವೃತ್ತಿಯಾಗಿದ್ದಾರೆ.
ದುಬೈ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸ್ಪೇನ್ ನ ಆದ ಫೆಲಿಸಿಯಾನೊ ವಿರುದ್ಧ ಸೆಣಸಿದ ಜೊಕೊ, 2ನೇ ಸೆಟ್ ನಲ್ಲಿ ಸೆಣಸುತ್ತಿದ್ದಾಗ ಕಣ್ಣಿನ ಸಮಸ್ಯೆಗೆ ಒಳಗಾದರು. ಹಾಗಾಗಿ, ಅವರು ಆಟದ ಮಧ್ಯೆಯೇ ನಿವೃತ್ತಿ ಘೋಷಿಸಬೇಕಾಯಿತು. ಅಷ್ಟರಲ್ಲಿ ಅವರಾಗಲೇ ಮೊದಲ ಸೆಟ್ ನಲ್ಲಿ 6-3 ಅಂತರದ ಜಯ ಸಾಧಿಸಿದ್ದರು.