ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಶ್ರೀಲಂಕಾ ವಿರುದ್ಧ ಸರಣಿ ಕ್ಲೀನ್ ಸ್ವೀಪ್ ಮಾಡಿದ ಭಾರತ ವನಿತೆಯರ ತಂಡ

ಸತತ ಗೆಲುವು ಸಾಧಿಸುತ್ತಿರುವ ಭಾರತ ವನಿತೆಯರ ತಂಡ ಪ್ರವಾಸಿ ಶ್ರೀಲಂಕಾ ತಂಡವನ್ನು ಕ್ಲೀನ್ ಸ್ವೀಪ್ ಮಾಡಿದೆ...

ಭಾರತ ವನಿತೆಯರ ಕ್ರಿಕೆಟ್ ತಂಡ
Vishwanath S
Updated On : 26 Feb 2016, 4:49 am

ರಾಂಚಿ: ಸತತ ಗೆಲುವು ಸಾಧಿಸುತ್ತಿರುವ ಭಾರತ ವನಿತೆಯರ ತಂಡ ಪ್ರವಾಸಿ ಶ್ರೀಲಂಕಾ ತಂಡವನ್ನು ಕ್ಲೀನ್ ಸ್ವೀಪ್ ಮಾಡಿದೆ.

ರಾಂಚಿಯಲ್ಲಿ ನಡೆದ ಟಿ20 ಸರಣಿಯ 3ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 89 ರನ್​ಗಳ ಸಾಧಾರಣ ಮೊತ್ತವನ್ನು ಪೇರಿಸಿತು. 90 ರನ್ ಗಳ ಗುರಿ ಬೆನ್ನಟ್ಟಿದ ಭಾರತ ಭಾರತ 9 ವಿಕೆಟ್​ಗಳಿಂದ ಶ್ರೀಲಂಕಾ ತಂಡವನ್ನು ಮಣಿಸಿತು.

ಭಾರತದ ಪರ ವಿ.ಆರ್ ವನಿತಾ 34, ಎಸ್ ಮಂದನಾ ಅಜೇಯ 43, ವಿ ಕೃಷ್ಣಮೂರ್ತಿ 13* ರನ್ ಗಳಿಸಿದರು.

ಶ್ರೀಲಂಕಾ ಪರ ಎ.ಸಿ. ಜಯಾನ್ಗನಿ 21, ಎಲ್​ಇ ಕೌಸಲ್ಯ 25 ಅಜೇಯ ರನ್​ಗಳ ಗರಿಷ್ಠ ಕೊಡುಗೆ ನೀಡಿದರು.

ಭಾರತ ಪರ ಇ ಬಿಶ್ತ್ 3, ಎ ಎ ಪಾಟಿಲ್ 2, ಪೂನಂ ಯಾದವ್ 1 ಹಾಗೂ ಆರ್ ಎಸ್ ಗಾಯಕ್ವಾಡ್ 1 ವಿಕೆಟ್ ಗಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement