ನವದೆಹಲಿ: ಏಷ್ಯಾ ಫೋರ್ಬ್ಸ್ ನಿಯತಕಾಲಿಕೆ ಪಟ್ಟಿಯಲ್ಲಿ ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ, ದೇಶದ ನಂ.1 ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತು ಹೆಸರಾಂತ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಮುಂಚೂಣಿಯಲ್ಲಿದ್ದಾರೆ.
ಈ ಪಟ್ಟಿಯಲ್ಲಿ ಭಾರತದ 56 ಮಂದಿ ಸ್ಥಾನ ಪಡೆದಿರುವುದು ಮತ್ತೊಂದು ದಾಖಲೆಯಾಗಿದೆ.
ಕಲೆ ಮತ್ತು ಶೈಲಿ, ಆಹಾರ ಮತ್ತು ಪಾನೀಯ, ವಿದ್ಯುತ್, ಮನರಂಜನೆ ಮತ್ತು ಕ್ರೀಡೆ, ಮಾಧ್ಯಮ ಮತ್ತು ಮಾರುಕಟ್ಟೆ ಸೇರಿದಂತೆ ಒಟ್ಟು 10 ವಿಭಾಗಗಳಲ್ಲಿ ಪ್ರಭಾವಿಗಳಾಗಿರುವ 30 ವರ್ಷದೊಳಗಿನ ಯುವ ನಾಯಕರುಗಳನ್ನು ಇದೇ ಮೊಟ್ಟ ಮೊದಲ ಬಾರಿಗೆ ಫೋರ್ಬ್ಸ್ ಬಿಡುಗಡೆ ಮಾಡಿದೆ.
ಭಾರತ, ಇಂಡೋನೇಷಿಯಾ, ಚೀನಾ, ಹಾಂಕಾಂಗ್, ಸಿಂಗಪುರ, ಜಪಾನ್, ಪಾಕಿಸ್ತಾನ, ವಿಯೆಟ್ನಾಂ ಮತ್ತು ಆಸ್ಟ್ರೇಲಿಯಾದಿಂದ 30 ಅಂಡರ್ 30 ಏಷ್ಯಾ ಪಟ್ಟಿಯಲ್ಲಿ ಸಾನಿಯಾ ಭಾರತ ಕಂಡ ಯಶಸ್ವಿ ಟೆನಿಸ್ ಆಟಗಾರ್ತಿ ಎನಿಸಿದ್ದರೆ, ಸೈನಾ ರೋಲ್ ಮಾಡಲ್ ಆಗಿದ್ದು, ಭಾರತದ ಬ್ಯಾಡ್ಮಿಂಟನ್ ರಾಣಿ ಎಂದು ಬಣ್ಣಿಸಲಾಗಿದೆ.