ಕ್ರೀಡೆ

ಹರ್ಭಜನ್ ಸಿಂಗ್ ಗೆ ಅನ್ಯಾಯವಾಗುತ್ತಿದೆ ಎಂದ ಪಾಕ್ ಬೌಲರ್

Vishwanath S

ಮೀರ್ಪುರ್: ಟೀಂ ಇಂಡಿಯಾದಲ್ಲಿದ್ದರು ಖಾಯಂ ಆಗಿ ಎಕ್ಸ್'ಟ್ರಾ ಪ್ಲೇಯರ್ ಆಗಿರುವ ಹರ್ಭಜನ್ ಸಿಂಗ್ ಬಗ್ಗೆ ಪಾಕಿಸ್ತಾನ ಕ್ರಿಕೆಟಿಗ ಸಕ್ಲೇನ್ ಮುಷ್ತಾಕ್ ಅನುಕಂಪ ವ್ಯಕ್ತಪಡಿಸಿದ್ದು, ವರ್ಲ್ಡ್ ಕ್ಲಾಸ್ ಬೌಲರ್ ಎನಿಸಿರುವ ಭಜ್ಜಿಯನ್ನು ಅನ್ಯಾಯವಾಗಿ ಕಡೆಗಣಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ತಂಡದಲ್ಲಿರುವ ಹರ್ಭಜನ್ ಸಿಂಗ್ ಗೆ ಕಳೆದ 7 ಟಿ20 ಪಂದ್ಯಗಳಲ್ಲಿ ಒಮ್ಮೆಯೂ ಅವಕಾಶ ಸಿಕ್ಕಿಲ್ಲದಿರುವುದಕ್ಕೆ ಪಾಕ್ ಬೌಲರ್ ಅಚ್ಚರಿ ಪಟ್ಟಿದ್ದಾರೆ. ಟೆಸ್ಟ್ ಕ್ರಿಕೆಟ್'ನಲ್ಲಿ 208 ವಿಕೆಟ್'ಗಳು, ಏಕದಿನ ಕ್ರಿಕೆಟ್'ನಲ್ಲಿ 288 ವಿಕೆಟ್'ಗಳನ್ನು ಪಡೆದ ಒಬ್ಬ ಸಾಧಕನನ್ನು ಇಷ್ಟಬಂದಂತೆ ಬಲಿಪಶುವನ್ನಾಗಿ ಮಾಡುತ್ತಿರುವುದಕ್ಕೆ ಸಕ್ಲೇನ್ ಖೇದ ವ್ಯಕ್ತಪಡಿಸಿದ್ದಾರೆ.

"ಭಾರತದ ಕ್ರಿಕೆಟ್ ಮಂಡಳಿ ಮತ್ತು ತಂಡದ ಆಡಳಿತವು ಹರ್ಭಜನ್'ರನ್ನು ನಡೆಸಿಕೊಳ್ಳುವ ರೀತಿ ಸರಿ ಇಲ್ಲ ಎಂದನಿಸುತ್ತದೆ. ಅವರೊಬ್ಬ ವರ್ಲ್ಡ್ ಕ್ಲಾಸ್ ಬೌಲರ್ ಆಗಿದ್ದವರು. ಈಗಲೂ ವರ್ಲ್ಡ್ ಕ್ಲಾಸ್ ಬೌಲರೇ ಆಗಿದ್ದಾರೆ. ಅಶ್ವಿನ್ ಬಂದ ನಂತರ ಕೈಬಿಡಬಿಡುವುದಾಗಲೀ, ಅವರ ಮೇಲೆ ಒತ್ತಡ ಹಾಕುವುದಾಗಲೀ ಆಗಬೇಕಂತಿಲ್ಲ ಪಾಕ್ ಸ್ಪಿನ್ನರ್ ಸಕ್ಲೇನ್ ಅಭಿಪ್ರಾಯಪಟ್ಟಿದ್ದಾರೆ.

SCROLL FOR NEXT