ಕ್ರೀಡೆ

ಫಿಫಾ ಅಧ್ಯಕ್ಷಗಾದಿಗೇರಿದ ಜಿಯಾನಿ ಇನ್‌ಫ್ಯಾಂಟಿನೊ

Vishwanath S

ಜ್ಯೂರಿಚ್: ಭ್ರಷ್ಟಾಚಾರ ಹಗರಣಗಳಿಂದಾಗಿ ಕಳಂಕಕ್ಕೀಡಾಗಿದ್ದ ಅಂತಾರಾಷ್ಟ್ರೀಯ ಫುಟ್ಬಾಲ್ ಸಂಸ್ಥೆ(ಫಿಫಾ)ಗೆ ಸ್ವಿಜರ್ಲೆಂಡ್ ನ ಜಿಯಾನಿ ಇನ್‌ಫ್ಯಾಂಟಿನೊ ಆಯ್ಕೆಯಾಗಿದ್ದಾರೆ.

ಜ್ಯೂರಿಚ್ ನ ಹೆಲೆನ್ ಸ್ಟೇಡಿಯಂನಲ್ಲಿ ನಡೆದ ಜಿದ್ದಾಜಿದ್ದಿನ ನಿರ್ಣಾಯಕ ಸುತ್ತಿನ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಶೇಖ್ ಸಲ್ಮಾನ್ ಬಿನ್ ಇಬ್ರಾಹಿಂರನ್ನು 27 ಮತಗಳಿಂದ ಜಿಯಾನಿ ಹಿಂದಿಕ್ಕಿದರು.

ಇದೇ ವೇಳೆ ಫಿಫಾ ಆಡಳಿತದಲ್ಲಿ ಮಹತ್ತರದ ಬದಲಾವಣೆ ತರುವ ದೃಷ್ಟಿಯಿಂದ ಅಧ್ಯಕ್ಷ ಸ್ಥಾನವನ್ನು ಮೂರು ಅವಧಿಗೆ ಮಾತ್ರ ಕಡ್ಡಾಯಗೊಳಿಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ.

SCROLL FOR NEXT