ಕ್ರೀಡೆ

ಇಂಗ್ಲೆಂಡ್ ಬ್ಯಾಟಿಂಗ್ ಸಲಹೆಗಾರರಾಗಿ ಜಯವರ್ಧನೆ ನೇಮಕ; ಲಂಕಾ ಮಂಡಳಿ ಬೇಸರ

Srinivasamurthy VN

ಕೊಲಂಬೋ: ಶ್ರೀಲಂಕಾದ ಮಾಜಿ ಆಟಗಾರ ಮಹೇಲಾ ಜಯವರ್ಧನೆ ಅವರು ಇಂಗ್ಲೆಂಡ್ ನ ಬ್ಯಾಟಿಂಗ್ ಸಲಹೆಗಾರರಾಗಿ ನೇಮಕವಾಗಿರುವುದಕ್ಕೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಬೇಸರ  ವ್ಯಕ್ತಪಡಿಸಿದೆ.

ಮಹೇಲಾ ಜಯವವರ್ಧನೆ ಅವರಿಗೆ ಶ್ರೀಲಂಕಾ ತಂಡ ದೌರ್ಬಲ್ಯಗಳ ಬಗ್ಗೆ ಅರಿವಿದೆ. ಹೀಗಾಗಿ ಮುಂಬರುವ ಟಿ20 ವಿಶ್ವಕಪ್ ನಲ್ಲಿ ಅವರು ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಸಲಹೆಗಾರರಾಗಿ  ಒಪ್ಪಂದ ಮಾಡಿಕೊಂಡಿರುವು ಶ್ರೀಲಂಕಾ ತಂಡದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಹಿಂದೆ ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ ಜಯವರ್ಧನೆ ಮಾರ್ಗದರ್ಶನದಲ್ಲಿ  ಇಂಗ್ಲೆಂಡ್ ಉತ್ತಮ ನಿರ್ವಹಣೆ ತೋರಿತ್ತು. ಹೀಗಾಗಿ ಜಯವರ್ಧನೆ ನಿರ್ಧಾರ ನಿಜಕ್ಕೂ ನಮಗೆ ಆಘಾತ ತಂದಿದೆ ಎಂದು ಲಂಕಾ ಕ್ರಿಕೆಟ್ ಮಂಡಳಿ ಹೇಳಿದೆ.

ಇನ್ನು ಈ ಬಗ್ಗೆ ಮಾತನಾಡಿರುವ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ತಿಲಂಗಾ ಸುಮತಿಪಾಲ ಅವರು, ಜಯವರ್ಧನೆ ಮತ್ತು ವೃತ್ತಿಪರತೆ ಬಗ್ಗೆ ನಮಗೆ ನಿಜಕ್ಕೂ ಹೆಮ್ಮೆ ಇದೆ. ಆದರೆ   ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಜಯವರ್ಧನೆಗೆ ಲಂಕಾ ತಂಡದ ದೌರ್ಬಲ್ಯಗಳ ಬಗ್ಗೆ ಅರಿವಿದೆ. ಜಯವರ್ಧನೆ ಮುಂದಿನ ಟಿ20 ವಿಶ್ವಕಪ್ ಟೂರ್ನಿಗೆ ಇಂಗ್ಲೆಂಡ್  ತಂಡದ ಬ್ಯಾಟಿಂಗ್ ಸಲಹೆಗಾರರಾಗಿ ಒಪ್ಪಂದ ಮಾಡಿಕೊಂಡಿದ್ದು, ಇದು ಲಂಕಾ ಆಟಗಾರರ ಮೇಲೆ ಪರಿಣಾಮ ಬೀರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

SCROLL FOR NEXT