ಪಾಕಿಸ್ತಾನ ಅಭಿಮಾನಿ 
ಕ್ರೀಡೆ

ಹೆಲ್ಮೆಟ್, ಗ್ಲೌಸ್ ಇಲ್ಲದೆ ಭಾರತೀಯ ಬೌಲರ್‌ಗಳ ಬೆವರಿಳಿಸುವೆ ಎಂದ ಪಾಕ್ ಅಭಿಮಾನಿ

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಏಷ್ಯಾಕಪ್ ಟಿ20 ಟೂರ್ನಿಯ ಟೀಂ ಇಂಡಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡ ರನ್ ಗಳಿಸಿಲು ಪರದಾಡಿತು...

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಏಷ್ಯಾಕಪ್ ಟಿ20 ಟೂರ್ನಿಯ ಟೀಂ ಇಂಡಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡ ರನ್ ಗಳಿಸಿಲು ಪರದಾಡಿತು. ಪಂದ್ಯವನ್ನು ಕೌತುಕದಿಂದ ವೀಕ್ಷಿಸುತ್ತಿದ್ದ ದುಬೈನ ಅಭಿಮಾನಿಯೊಬ್ಬ ಪಾಕ್ ಆಟಗಾರರ ಪರದಾಟದಿಂದ ಬೇಸತ್ತ ಅಭಿಮಾನಿ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ರ ಮುಂದೆ ಬೇಡಿಕೆಯೊಂದನ್ನು ಇಟ್ಟಿದ್ದಾನೆ.

ನವಾಜ್ ಷರೀಫ್ ಅವರೇ ನನಗೊಂದು ಅವಕಾಶ ಕೊಡಿ ಈ ಭಾರತೀಯ ಬೌಲರ್ ಗಳ ಬೆವರಿಳಿಸುವೆ ಅದು ಹೆಲ್ಮೆಟ್ ಹಾಗೂ ಗ್ಲೌಸ್ ಆಗದೇನೆ ಸಿಕ್ಸರ್ ಹಾಗೂ ಬೌಂಡರಿಗಳನ್ನು ಸಿಡಿಸಿ ಕ್ರಿಕೆಟ್ ಆಟ ಎನೆಂಬುದನ್ನು ನಮ್ಮ ಪಾಕ್ ಆಟಗಾರರಿಗೆ ತೋರಿಸುತ್ತೇನೆ ಎಂದು ವಿಡಿಯೋವೊಂದನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾನೆ.

ಒಂದು ವೇಳೆ ಭಾರತೀಯ ಬೌಲರ್ ಗಳನ್ನು ನಾನು ದಂಡಿಸದೆ ಇದ್ದರೆ ಇದೇ ಕ್ರೀಡಾಂಗಣದಲ್ಲಿ ನನ್ನ ಕೈಗಳನ್ನು ಕಡಿದುಕೊಳ್ಳುತ್ತೇನೆ ಎಂದು ಸವಾಲು ಹಾಕಿದ್ದಾನೆ.

ಶನಿವಾರ ನಡೆದ ಪಂದ್ಯ ಮೊದಲು ಬ್ಯಾಟ್ ಮಾಡಿದ್ದ ಪಾಕಿಸ್ತಾನ 83 ರನ್ ಗಳಿಗೆ ಆಲೌಟ್ ಆಗಿತ್ತು. 84 ರನ್ ಗಳ ಬೆನ್ನತ್ತಿದ್ದ ಭಾರತ 5 ವಿಕೆಟ್ ನಷ್ಟಕ್ಕೆ 85 ರನ್ ಪೇರಿಸಿ ಜಯ ಗಳಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜನರ ಭಾವನೆ ಮೇಲೆ ರಾಜಕಾರಣ ಮಾಡಲ್ಲ: ಸುಮ್ಮನೆ ಘೋಷಣೆ ಮಾಡಿ ಮರೆಯುವ ಜಾಯಮಾನ ನಮ್ಮದಲ್ಲ- ಸಿಎಂ ಡಿಕೆ ಶಿವಕುಮಾರ್!

ಟಿ. ನರಸೀಪುರ ಶೋಭಾಯಾತ್ರೆ: ಮಸೀದಿ ಮುಂದೆ ಪಟಾಕಿ ಸಿಡಿಸಿ ಸಂಭ್ರಮ, ಒಂದುವರೆ ವರ್ಷದಲ್ಲಿ ನಾವು ಬರ್ತೀವಿ, ಅವಾಗ ಲೆಕ್ಕ ಚುಪ್ತ ಮಾಡ್ತೀವಿ- ಪ್ರತಾಪ್ ಸಿಂಹ

ಪಂಚಾಯ್ತಿ ಚುನಾವಣೆ ನಡೆಸಲು ಸಚಿವ ಸಂಪುಟದ ನಿರ್ಧಾರ: EVM ಬದಲು ಮತಪೆಟ್ಟಿಗೆ ಬಳಕೆ

ಅಭಿಮಾನಿಯ ಕಾಲಿನ ಮೇಲೆ ಹತ್ತಿದ ಕಾರು: ತಾಳ್ಮೆ ಕಳೆದುಕೊಂಡು ಚಾಲಕನಿಗೆ ಹಿಗ್ಗಾಮುಗ್ಗಾ ಬೈದ ಸಲ್ಮಾನ್ ಖಾನ್! video

ಸಾಕ್ಷ್ಯ ವಿಚಾರಣೆ ವೇಳೆ ದರ್ಶನ್ ಖುದ್ದು ಹಾಜರಾಗಲು ಹೈಕೋರ್ಟ್ ಒಪ್ಪಿಗೆ, ಷರತ್ತು ಅನ್ವಯ!