ನೆಲ್ಸನ್(ನ್ಯೂಜಿಲೆಂಡ್): ಆತಿಥೇಯ ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ ನಡುವಿನ 4ನೇ ಏಕದಿನ ಪಂದ್ಯ ಮಳೆಯಿಂದಾಗಿ ಯಾವುದೇ ಫಲಿತಾಂಶವಿಲ್ಲದೆ ಮುಕ್ತಾಯಗೊಂಡಿದೆ.
ಸ್ಯಾಕ್ಸ್ ಟನ್ ಕ್ರೀಡಾಂಗಣದಲ್ಲಿ ಶನಿವಾರ ಬೆಳಗ್ಗೆ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಮೊದಲು ನ್ಯೂಜಿಲೆಂಡ್ ತಂಡವನ್ನು ಬ್ಯಾಟಿಂಗ್ ಗೆ ಇಳಿಸಿತು.
ಹಾಗಾಗಿ, ಮೊದಲು ಬ್ಯಾಟ್ ಮಾಡಿದ್ದ ನ್ಯೂಜಿಲೆಂಡ್, 9 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 75 ರನ್ ಗಳಿಸಿತ್ತು. ಅಷ್ಟರಲ್ಲಾಗಲೇ, ಆರಂಭಿಕರಾದ ಗುಪ್ಟಿಲ್ (27 ರನ್), ಲಾಥಮ್ (9) ಹಾಗೂ ಮೂರನೇ ಕ್ರಮಾಂಕದ ವಿಲಿಯಮ್ಸನ್ (12) ಪೆವಿಲಿಯನ್ ಸೇರಿದ್ದರು.
ಟೇಲರ್(20), ನಿಕೋಲಸ್(4) ಕ್ರೀಸ್ ನಲ್ಲಿದ್ದರು. ಅಷ್ಟರಲ್ಲಿ ಧಾರಾಕಾರ ಮಳೆ ಸುರಿದಿದ್ದರಿಂದ ಪಂದ್ಯವನ್ನು ಅಷ್ಟಕ್ಕೇ ನಿಲ್ಲಿಸಲಾಯಿತು.
ಸರಣಿಯ ಕೊನೆಪಂದ್ಯ ಜ. 5ರಂದು ವೆಲ್ಲಿಂಗ್ಟನ್ನಲ್ಲಿ ನಡೆಯಲಿದೆ. ಈಗಾಗಲೇ ಐದು ಪಂದ್ಯಗಳ ಈ ಸರಣಿ ಯಲ್ಲಿ ಕಿವೀಸ್ 21ರ ಮುನ್ನಡೆ ಪಡೆದಿದೆ.