ಕೊಲಂಬೊ: ಶ್ರೀಲಂಕಾ ಕ್ರಿಕೆಟ್ ಮಂಡಳಿ(ಎಸ್ಎಲ್ಬಿ)ಯ ಆಡಳಿತ ಚುಕ್ಕಾಣಿ ಹಿಡಿಯಲು ಯತ್ನಿಸಿದ್ದ ಮಾಜಿ ಕ್ರಿಕೆಟಿಗ ಅರ್ಜುನ ರಣತುಂಗ ಹಾಗೂ ಅವರ ಸಹೋದರ ನಿಶಾಂತ ರಣತುಂಗ ಅವರಿಗೆ ತೀವ್ರ ಹಿನ್ನಡೆಯುಂಟಾಗಿದೆ.
ನಿಶಾಂತ ರಣತುಂಗ ಅವರು ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರೆ, ಅರ್ಜುನ ರಣತುಂಗ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಅಧ್ಯಕ್ಷೀಯ ಚುನಾವಣೆ ಯಲ್ಲಿ ಹಾಲಿ ಶ್ರೀಲಂಕಾ ಸಂಸತ್ ಸ್ಪೀಕರ್ ತಿಲಂಗಾ ಸುಮತಿಪಾಲಾ ಅವರು ಜಯ ಸಾಧಿಸಿದರೆ, ಉಪಾಧ್ಯಕ್ಷ ಸ್ಥಾನಕ್ಕೆ ಜಯಂತಾ ಧರ್ಮದಾಸ ಆಯ್ಕೆಯಾಗಿದ್ದಾರೆ. ಇದು ರಣತುಂಬಾ ಸಹೋದರರಿಗೆ ನಿರಾಸೆ ತಂದಿದೆ. ಅಧ್ಯಕ್ಷ ಸ್ಥಾನಕ್ಕೇರಿರುವ ತಿಲಂಗಾ, ಮೂರನೇ ಬಾರಿಗೆ ಎಸ್ಎಲ್ಬಿಯ ಸಾರಥ್ಯ ವಹಿಸಿದಂತಾಗಿದೆ.