ಮೆಲ್ಬೋರ್ನ್: ಭದ್ರತಾ ಕಾರಣಗಳನ್ನು ಮುಂದೊಡ್ಡಿ ಇದೆ ತಿಂಗಳು 22 ರಿಂದ ಬಾಂಗ್ಲಾದೇಶದಲ್ಲಿ ಆರಂಭವಾಗಲಿರುವ ಐಸಿಸಿ ಕಿರಿಯರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಿಂದ ಆಸ್ಟ್ರೇಲಿಯಾ ಹಿಮ್ಮೆಟ್ಟಿದೆ.
ಇದೇ ಭದ್ರತಾ ಕಾರಣಗಳಿಗಾಗಿ ಕಳೆದ ಅಕ್ಟೋಬರ್ ತಿಂಗಳಲ್ಲಿ ನಡೆಯಬೇಕಿದ್ದ ಬಾಂಗ್ಲಾ ದೇಶ ಪ್ರವಾಸವನ್ನು ರಾಷ್ಟ್ರೀಯ ತಂಡ ಮೊಟಕುಗೊಳಿಸಿತ್ತು. ಅಂದಹಾಗೆ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯಾ ಮೂರು ಬಾರಿ ಚಾಂಪಿಯನ್ ಆಗಿದೆ. ಇದೊಂದು ಕಠಿಣ ನಿರ್ಧಾರ. ಆದರೆ ವಿಧಿಯಿಲ್ಲದೇ ಇಂಥದ್ದೊಂದು ನಿರ್ಧಾರಕ್ಕೆ ಬರಲಾಗಿದೆ ಎಂದಿದ್ದಾರೆ.