ಸೂಪರ್ ಡಿವಿಷನ್ ಲೀಗ್: ಓಜೋನ್ ಗೆ ರೋಚಕ ಜಯ
ಅಕ್ಷಯ್ ಕುಮಾರ್ ಬಾರಿಸಿದ ಗೋಲಿನ ನೆರವಿನೊಂದಿಗೆ ಸೌತ್ ಯುನೈಟೆಡ್ ವಿರುದ್ಧ ಓಜೋನ್ ಬೆಂಗಳೂರು ಎಫ್ ಸಿ ತಂಡ 1-0 ಗೋಲಿನ ರೋಚಕ ಜಯ ಪಡೆಯಿತು.
ಬೆಂಗಳೂರು: ಅತ್ಯಂತ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಪಂದ್ಯದ ಕೊನೇ ಘಳಿಗೆಯಲ್ಲಿ ಅಂದರೆ 90+2ನೇ ನಿಮಿಷದಲ್ಲಿ ಅಕ್ಷಯ್ ಕುಮಾರ್ ಬಾರಿಸಿದ ಗೋಲಿನ ನೆರವಿನೊಂದಿಗೆ ಸೌತ್ ಯುನೈಟೆಡ್ ವಿರುದ್ಧ ಓಜೋನ್ ಬೆಂಗಳೂರು ಎಫ್ ಸಿ ತಂಡ 1-0 ಗೋಲಿನ ರೋಚಕ ಜಯ ಪಡೆಯಿತು.
ಅಶೋಕನಗರದ ಫುಟ್ಬಾಲ್ ಮೈದಾನದಲ್ಲಿ ನಡೆಯುತ್ತಿರುವ ಬೆಂಗಳೂರು ಜಿಲ್ಲಾ ಫುಟ್ಬಾಲ್ ಸಂಸ್ಥೆ (ಬಿಡಿಎಫ್ ಎ) ಆಶ್ರಯದ ಸೂಪರ್ ಡಿವಿಷನ್ ಲೀಗ್ನ ಮಂಗಳವಾರದ ಪಂದ್ಯ-ದಲ್ಲಿ ಡಾನ್ ಬಾಸ್ಕೋ ಅವರಿಗೆ ಬದಲಿ ಆಟಗಾರನಾಗಿ ಮೈದಾನಕ್ಕಿಳಿದ ಅಕ್ಷಯ್, ಜಯದ ರೂವಾರಿಯಾದರು ಎನಿಸಿದರು. ಇತ್ತ `ಎ' ಡಿವಿಷನ್ ನಲ್ಲಿ ಬೆಂಗಳೂರು ಇಂಡಿಪೆಂಡೆಂಟ್ಸ್ ವಿರುದ್ಧ ಎಜಿಒಆರ್ಸಿ 1-0 ಗೋಲಿನಿಂದ ಜಯಿಸಿತು.