ನವದೆಹಲಿ: 2015ರಲ್ಲಿ ಆನ್‌ಲೈನ್‌ನಲ್ಲಿ ಭಾರತೀಯರು ಅತೀ ಹೆಚ್ಚು ಶೋಧ ಮಾಡಿದ ಕ್ರಿಕೆಟಿಗ ವಿರಾಟ್ ಕೊಹ್ಲಿ.
ಗೂಂಜ್ ಇಂಡಿಯಾ ಇಂಡೆಕ್ಸ್ 2015ರ ವರದಿ ಪ್ರಕಾರ ಭಾರತದ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅತೀ ಜನಪ್ರಿಯ ಕ್ರೀಡಾಪಟುವಾಗಿದ್ದಾರೆ.
ಜನಪ್ರಿಯತೆಯಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ಕ್ರಿಸ್ಟಿನೋ ರೊನಾಲ್ಡೋ ಅವರನ್ನು ವಿರಾಟ್ ಹಿಂದಿಕ್ಕಿದ್ದಾರೆ. ಬಿಸಿಸಿಐ ವರ್ಷದ ಪ್ರಶಸ್ತಿಯಲ್ಲಿ ಭಾರತದ ವರ್ಷದ ಕ್ರಿಕೆಟಿಗ ಎಂಬ ಪ್ರಶಸ್ತಿಯೂ ವಿರಾಟ್ ಪಾಲಾಗಿತ್ತು.
ಕೊಹ್ಲಿಯವರ ನಾಯಕತ್ವದಲ್ಲಿ ಭಾರತ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಟೆಸ್ಟ್ ಪಂದ್ಯಗಳನ್ನು ಗೆದ್ದಿತ್ತು. 2 ದಶಕಗಳ ನಂತರ ಶ್ರೀಲಂಕಾ ನೆಲದಲ್ಲಿ ಟೆಸ್ಟ್ ಪಂದ್ಯ ಗೆದ್ದಿರುವುದು ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ 3-0 ಅಂತರದಲ್ಲಿ ಪಂದ್ಯ ಗೆದ್ದಿರುವುದು ವಿರಾಟ್ ಕೊಹ್ಲಿಯ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos