ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಇನ್ಮುಂದೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ಟೆನಿಸ್, ಹಾಕಿ!

ತ್ರಿಸದಸ್ಯ ಸಮಿತಿ ನೀಡಿರುವ ಶಿಫಾರಸುಗಳೆಲ್ಲ ಜಾರಿಯಾದರೆ ನಾಗ್ಪುರ ಮತ್ತು ರಾಜ್ ಕೋಟ್ ನಲ್ಲಿರುವ ಕ್ರಿಕೆಟ್ ಮೈದಾನಗಳು ಶೀಘ್ರದಲ್ಲೇ ಹಾಕಿ ಟೆಸ್ಟ್, ಡೇವಿಸ್ ಕಪ್ ಟೆನಿಸ್ ಪಂದ್ಯದ ತಾಣಗಳಾಗಲಿವೆ.

ಇನ್ಮುಂದೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ಟೆನಿಸ್, ಹಾಕಿ!
Srinivas Rao BV
Updated On : 6 Jan 2016, 12:34 pm

ನವದೆಹಲಿ: ಬಿಸಿಸಿಐನ ಆಮೂಲಾಗತ್ರ ಬದಲಾವಣೆಗಾಗಿ ಸೋಮವಾರವಷ್ಟೇ ನ್ಯಾ.ಆರ್. ಎಂ ಲೋಧ ನೇತೃತ್ವದ ತ್ರಿಸದಸ್ಯ ಸಮಿತಿ ನೀಡಿರುವ ಶಿಫಾರಸುಗಳೆಲ್ಲವೂ ಜಾರಿಯಾದರೆ, ಪುಣೆ ನಾಗ್ಪುರ ಮತ್ತು ರಾಜ್ ಕೋಟ್ ನಲ್ಲಿರುವ ಕ್ರಿಕೆಟ್ ಮೈದಾನಗಳು ಶೀಘ್ರದಲ್ಲೇ ಹಾಕಿ ಟೆಸ್ಟ್, ಡೇವಿಸ್ ಕಪ್ ಟೆನಿಸ್ ಪಂದ್ಯದ ಆತಿಥ್ಯದ ತಾಣಗಳಾಗಲಿವೆ.
ಸರ್ವೋಚ್ಛ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಶಿಫಾರಸಿನ ವರದಿಯಲ್ಲಿ ಇದನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ತನ್ನ ವರದಿಯಲ್ಲಿ ಕ್ರಿಕೆಟ್ ಮೈದಾನಗಳನ್ನು ಇತರೆ ಕ್ರೀಡೆಗಳಾದ ಹಾಕಿ ಹಾಗೂ ಟೆನಿಸ್ ಪಂದ್ಯಗಳ ಆಯೋಜನೆಗೆ ಅವಕಾಶ ಮಾಡಿಕೊಡಬೇಕು. ಆ ಮೂಲಕ ರಾಜ್ಯ ಸಂಸ್ಥೆಗಳು ಉತ್ತಮ ಆದಾಯ ಪಡೆಯಬಹುದಾಗಿದೆ ಎಂದು ತಿಳಿಸಿದೆ. 
"ಈಗಾಗಲೇ ಲಭ್ಯವಿರುವ ಕ್ರೀಡಾಂಗಣಗಳಲ್ಲಿ ಆಸ್ಟ್ರೋ ಟರ್ಫ್ ಹಾಕಿ ಮತ್ತು ಕಾರ್ಪೆಟ್ ಟೆನಿಸ್ ಪಂದ್ಯಗಳನ್ನು ಆಯೋಜಿಸಬಹುದು. ಈ ಮೂಲಕ ಲಭ್ಯವಾಗುವ ಆದಾಯವನ್ನು ಕ್ರಿಕೆಟ್ ಹೊರತಾದ ಮಿಕ್ಕ ಕ್ರೀಡೆಯ ಒಟ್ಟಾರೆ ಬೆಳವಣಿಗೆಗೆ ಬಳಸಿಕೊಳ್ಳಬಹುದು. ಈ ಪಂದ್ಯಗಳನ್ನು ಆಯೋಜಿಸುವಾಗ ಕ್ರಿಕೆಟ್‍ನ ಮುಖ್ಯ ಪಿಚ್‍ಗೆ ತೊಂದರೆಯಾಗದಂತೆ ನೋಡಿಕೊಂಡರೆ, ಯಾವುದೇ ಸಮಸ್ಯೆಯಾಗುವು ದಿಲ್ಲ'' ಎಂದು ವರದಿಯಲ್ಲಿನ ಶಿಫಾರಸಿನಲ್ಲಿ ವಿವರಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement