ನಾಯಕತ್ವಕ್ಕೆ ಬೈ ಹೇಳಿದ ಹಾಶೀಂ ಆಮ್ಲಾ
ದಿಢೀರ್ ಬೆಳವಣಿಗೆಯಲ್ಲಿ ದ. ಆಫ್ರಿಕಾ ಟೆಸ್ಟ್ ತಂಡದ ನಾಯಕ ಹಾಶೀಂ ಆಮ್ಲಾ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆ. ಬುಧವಾರ ಇಂಗ್ಲೆಂಡ್ ವಿರುದ್ಧದ 2ನೇ ಪಂದ್ಯ ಡ್ರಾ ಕಂಡ...
ಕೇಪ್ಟೌನ್: ದಿಢೀರ್ ಬೆಳವಣಿಗೆಯಲ್ಲಿ ದ. ಆಫ್ರಿಕಾ ಟೆಸ್ಟ್ ತಂಡದ ನಾಯಕ ಹಾಶೀಂ ಆಮ್ಲಾ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆ. ಬುಧವಾರ ಇಂಗ್ಲೆಂಡ್ ವಿರುದ್ಧದ 2ನೇ ಪಂದ್ಯ ಡ್ರಾ ಕಂಡ ಬಳಿಕ ಆಮ್ಲಾ ಸ್ವತಃ ಈ ನಿರ್ಧಾರ ಪ್ರಕಟಿಸಿದರು. ಕಳೆದ ವರ್ಷ ಸಾಕಷ್ಟು ನಿರಾಸೆ ಅನುಭವಿಸಿದ್ದ ಆಮ್ಲಾ ನೇತೃತ್ವದ ದ.ಆಫ್ರಿಕಾ, ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಸೋತಿತ್ತಾದರೂ, 2ನೇ ಟೆಸ್ಟ್ನಲ್ಲಿ 32 ವರ್ಷದ ಆಮ್ಲಾ ದ್ವಿಶತಕ ದಾಖಲಿಸಿ ತಂಡಕ್ಕೆ ಆಸರೆಯಾಗಿದ್ದರು. ಸಾಕಷ್ಟು ಯೋಚಿಸಿ, ಈ ತೀರ್ಮಾನಕ್ಕೆ ಬಂದಿದ್ದೇನೆ ಎಂದು ಆಮ್ಲಾ ತಿಳಿಸಿದರು. ಟೆಸ್ಟ್ ತಂಡದ ಸಾರಥ್ಯವನ್ನು ಸದ್ಯಕ್ಕೆ ಎಬಿ ಡಿವಿಲಿಯರ್ಸ್ಗೆ ವಹಿಸಲಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.