ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

64ನೇ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ ಷಿಪ್ : ಪ್ರಾಬಲ್ಯ ಮೆರೆದ ರೇಲ್ವೆಸ್

ನಿರೀಕ್ಷೆಯಂತೆಯೇ ಪ್ರಬಲ ಇಂಡಿಯನ್ ರೈಲ್ವೇಸ್ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ವಿಜೃಂಭಿಸಲಾಗಿ...

ರೈಲ್ವೇಸ್ ತಂಡದ ಸಂದೀಪ್ ಕುಮಾರ್ ಕರ್ನಾಟಕ ತಂಡದ ಆಟಗಾರರಿಗೆ ಪ್ರಬಲ ತಿರುಗೇಟು ನೀಡುತ್ತಿರುವುದು.
Sumana Upadhyaya
Updated On : 9 Jan 2016, 11:28 am

ಬೆಂಗಳೂರು: ನಿರೀಕ್ಷೆಯಂತೆಯೇ ಪ್ರಬಲ ಇಂಡಿಯನ್ ರೈಲ್ವೇಸ್ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ವಿಜೃಂಭಿಸಲಾಗಿ ಆತಿಥೇಯ ಕರ್ನಾಟಕದ ಸೆಮಿಫೈನಲ್ ಕನಸು ಭಗ್ನ ಕಂಡಿತು.

ಇಲ್ಲಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ 64ನೇ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ ಷಿಪ್ ಪಂದ್ಯಾವಳಿಯ ಪುರುಷರ ವಿಭಾಗದ ಕ್ವಾರ್ಟರ್ ಫೈನಲ್ ನಲ್ಲಿ ಇಂಡಿಯನ್ ರೈಲ್ವೇಸ್ ವಿರುದ್ಧ ಕರ್ನಾಟಕದ ಪುರುಷರ ತಂಡ1-3(25-16, 22-25, 25-17, 25-22) ಸೆಟ್ ಗಳಿಂದ ಸೋಲನುಭವಿಸಿತು. 90 ನಿಮಿಷಗಳ ಕಾಲ ನಡೆದ ಸೆಣಸಾಟದಲ್ಲಿ ಎರಡನೇ ಸೆಟ್ ಒಂದನ್ನು ಗೆದ್ದದ್ದು ಬಿಟ್ಟರೆ, ಮತ್ತೆ ರೈಲ್ವೇಸ್ ಗೆ ಸರಿಸಾಟಿಯಾಗಿ ನಿಲ್ಲಲು ಕರ್ನಾಟಕ ವಿಫಲವಾಯಿತು.

ರಾಜ್ಯ ವನಿತೆಯರಿಗೆ ನಿರಾಸೆ:
ಇತ್ತ ಮಹಿಳೆಯರ ವಿಭಾಗದಲ್ಲಿ ಕೂಡ ರಾಜ್ಯ ವನಿತೆಯರು ನಿರೀಕ್ಷಿತ ಸೋಲನುಭವಿಸಿದರು. ಒಂದು ತಾಸಿನ ಕಾದಾಟದಲ್ಲಿ ಬಲಾಢ್ಯ ಇಂಡಿಯನ್ ರೈಲ್ವೇಸ್ ವನಿತೆಯರು ಆಕ್ರಮಣಕಾರಿ ಆಟವಾಡಿ ರಾಜ್ಯದ ವಿರುದ್ಧ 25-17, 25-3, 25-8 ರಿಂದ ಜಯ ಪಡೆದರು. ಮೊದಲ ಸೆಟ್ ನಲ್ಲಿ ಒಂದಷ್ಟು ಪ್ರತಿರೋಧ ತೋರಿದ ಕರ್ನಾಟಕ ವನಿತೆಯರು, ಎರಡು ಮತ್ತು ಮೂರನೇ ಸೆಟ್ ನಲ್ಲಂತೂ ಅತ್ಯಂತ ಕಳಪೆ ಆಟವಾಡಿ ದಯನೀಯ ಸೋಲನುಭವಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement