ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಬಿಡಿಎಫ್ಎ ಫುಟ್ಬಾಲ್ ಲೀಗ್: ಈಗಲ್ಸ್ ಮಣಿಸಿದ ಇಂಡಿಪೆಂಡೆಂಟ್ಸ್

ಉತ್ತಮ ಪ್ರತಿಭೆಗಳ ತಂಡವಾಗಿರುವ ಬೆಂಗಳೂರು ಯುನೈಟೆಡ್ಸ್ ತಂಡ ಬೆಂಗಳೂರು ಈಗಲ್ಸ್ ತಂಡದ ವಿರುದ್ಧ `ಎ' ಡಿವಿಷನ್ ಪಂದ್ಯ-ದಲ್ಲಿ 2-1 ಗೋಲುಗಳ ಅಂತರದಲ್ಲಿ ಜಯ ಸಾಧಿಸಿದೆ.

ಬಿಡಿಎಫ್ಎ ಫುಟ್ಬಾಲ್ ಲೀಗ್: ಈಗಲ್ಸ್ ಮಣಿಸಿದ ಇಂಡಿಪೆಂಡೆಂಟ್ಸ್
Srinivas Rao BV
Updated On : 10 Jan 2016, 11:54 am

ಬೆಂಗಳೂರು: ಉತ್ತಮ ಪ್ರತಿಭೆಗಳ ತಂಡವಾಗಿರುವ ಬೆಂಗಳೂರು ಯುನೈಟೆಡ್ಸ್ ತಂಡ ಬೆಂಗಳೂರು ಈಗಲ್ಸ್ ತಂಡದ ವಿರುದ್ಧ `ಎ' ಡಿವಿಷನ್ ಪಂದ್ಯ-ದಲ್ಲಿ 2-1 ಗೋಲುಗಳ ಅಂತರದಲ್ಲಿ ಜಯ ಸಾಧಿಸಿದೆ.

ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಶನಿವಾರ ಮಧ್ಯಾಹ್ನ ನಡೆದ ಪಂದ್ಯದ 36ನೇ ನಿಮಿಷದಲ್ಲಿ ರಘು ಗಳಿಸಿದ ಗೋಲಿನ ನೆರವಿ ನಿಂದಾಗಿ, ಇಂಡಿ-ಪೆಂಡೆಂಟ್ಸ್ ತಂಡ ಯುನೈಟೆಡ್-ಗಿಂತ 1-0 ಅಂತರದ ಮುನ್ನಡೆ ಸಾಧಿಸಿತು. ಇದಾದ ನಂತರ, 50ನೇ ನಿಮಿಷದಲ್ಲಿ ಯುನೈಟೆಡ್ ತಂಡದ ಪರ ದಿನೇಶ್ ದಾಖಲಿಸಿದ ಗೋಲಿನಿಂದಾಗಿ ಈಗಲ್ಸ್ ತಂಡ 1-1ರ ಸಮಬಲ ಸಾಧಿಸಿತು. ಆದರೆ, ಯುವ ಗಣೇಶ್ 80ನೇ ನಿಮಿಷದಲ್ಲಿ ಗಳಿಸಿದ ಗೋಲು ಇಂಡಿ-ಪೆಂಡೆಂಟ್ಸ್ ತಂಡಕ್ಕೆ ಗೆಲವು ತಂದಿತು.

ನೀರಸ ಡ್ರಾ: `ಎ' ಡಿವಿಷನ್ ಪಂದ್ಯದ ನಂತರ ನಡೆದ ಎಂಇಜಿ ಆ್ಯಂಡ್ ಸಿ ಹಾಗೂ ಡಿವೈಇ ಎಸ್ ತಂಡಗಳ ನಡುವಣದ ಸೂಪರ್ ಡಿವಿಷನ್ ಪಂದ್ಯ ಯಾವುದೇ ಗೋಲು ದಾಖಲಾಗದ ಪರಿಣಾಮ ನೀರಸ ಡ್ರಾ ಕಂಡಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement