ಸಾನಿಯಾ ಮಿರ್ಜಾ- ಮಾರ್ಟಿನಾ ಹಿಂಗಿಸ್(ಸಂಗ್ರಹ ಚಿತ್ರ) 
ಕ್ರೀಡೆ

ಸಾನಿಯಾ- ಹಿಂಗಿಸ್ ಗೆ ಚಾಂಪಿಯನ್ ಪಟ್ಟ

ವಿಶ್ವದ ನಂ.೧ ಡಬಲ್ಸ್ ಮಹಿಳಾ ಜೋಡಿಯಾದ ಸಾನಿಯಾ ಮಿರ್ಜಾ ಮತ್ತು ಮಾರ್ಟಿನಾ ಹಿಂಗಿಸ್ ಪ್ರತಿಷ್ಠಿತ ಆಸ್ಟ್ರೇಲಿಯಾ ಓಪನ್ ಸಿದ್ಧತಾ ಟೂರ್ನಿಯಂತಿದ್ದ ಬ್ರಿಸ್ಬೇನ್ ಇಂಟರ್ ನ್ಯಾಷನಲ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿದ್ದಾರೆ.

ಬ್ರಿಸ್ಬೇನ್: ವಿಶ್ವದ ನಂ.1 ಡಬಲ್ಸ್ ಮಹಿಳಾ ಜೋಡಿಯಾದ ಸಾನಿಯಾ ಮಿರ್ಜಾ ಮತ್ತು ಮಾರ್ಟಿನಾ ಹಿಂಗಿಸ್ ಪ್ರತಿಷ್ಠಿತ ಆಸ್ಟ್ರೇಲಿಯಾ ಓಪನ್ ಸಿದ್ಧತಾ ಟೂರ್ನಿಯಂತಿದ್ದ ಬ್ರಿಸ್ಬೇನ್ ಇಂಟರ್ ನ್ಯಾಷನಲ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿದ್ದಾರೆ.

ಶನಿವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಜರ್ಮನಿಯ ಆಂಜೆಲಿಕ್ ಕೆರ್ಬರ್ ಹಾಗೂ ಆಂಡ್ರಿಯಾ ಪೆಟ್ಕೊವಿಕ್ ಎದ್ದುರು ಇಂಡೋ-ಸ್ವಿಸ್ ಜೋಡಿ 7 -5 , 6 -1 ನೇರ ಸೆಟ್ ಗಳಲ್ಲಿ ಗೆಲುವು ಪಡೆದು ಪ್ರಶಸ್ತಿ ಪಡೆದರು. ಇದರೊಂದಿಗೆ ವರ್ಷದ ಮೊದಲ ಡಬ್ಲ್ಯೂಟಿಎ ಟೂರ್ನಿಯಲ್ಲಿ ಸಾನಿಯಾ ಹಾಗೂ ಹಿಂಗಿಸ್ ಶುಭಾರಂಭ ಮಾಡಿದಂತಾಗಿದೆ.

ಪ್ರಶಸ್ತಿ ಸುತ್ತಿಗೆ ಫೆಡರರ್:
ಇತ್ತ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಹಾಲಿ ಚಾಂಪಿಯನ್, ಸ್ವಿಟ್ಜರ್ಲೆಂಡ್  ನ ರೋಜರ್ ಫೆಡರರ್ ಪ್ರಶಸ್ತಿ ಸುತ್ತಿಗೆ ಧಾವಿಸಿದ್ದಾರೆ. ಶನಿವಾರ ನಡೆದ ಅಂತಿಮ ನಾಲ್ಕರ ಘಟ್ಟದ ಪಂದ್ಯದಲ್ಲಿ ಕೆನಡಾದ ಮಿಲಾಸ್ ರೋನಿಕ್ ವಿರುದ್ಧ 17 ಗ್ರಾಂಡ್ ಸ್ಲಾಮ್ ಪ್ರಶಸ್ತಿಗಳ ಒಡೆಯ ಫೆಡರರ್ 6 -1 6 -4 ರ ಸುನಾಯಾಸ ಸೆಟ್ ಗಳಲ್ಲಿ ಗೆಲುವು ದಾಖಲಿಸಿ ಫೈನಲ್ ತಲುಪಿದರು.
ಅಜರೆಂಕಾ ಸಡ್ಡು: ಇನ್ನು ಟೂರ್ನಿಯ ಬೆಲಾರಸ್ ನ ವಿಕ್ಟೋರಿಯಾ ಅಜರೆಂಕಾ ಚಾಂಪಿಯನ್ ಆದರು. ವಿಶ್ವದ ಮಾಜಿ ನಂ.1 ಆಟಗಾರ್ತಿ, ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಸುತ್ತಿನಲ್ಲಿ ಜರ್ಮನಿಯ ಏಂಜಲಿಕ್ ಕೆರ್ಬರ್ ವಿರುದ್ಧ ಉತ್ತಮ ಏಸ್ ಗಳನ್ನು  ಸಿಡಿಸುವ ಮೂಲಕ 6 -3 6 -1 ಸೆಟ್ ಗಳ ಅಂತರದಲ್ಲಿ ಅಜರೆಂಕಾ ಜಯ ಸಾಧಿಸಿ ಆ ಮೂಲಕ ಆಸೀಸ್ ಓಪನ್ ಗೆ ಅಣಿಯಾದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

CJP protest: ಮಮತಾ ಬ್ಯಾನರ್ಜಿ, ನೇಹಾ ಬೋರಾ, ಯೋಗೇಂದ್ರ ಯಾದವ್ ವಶಕ್ಕೆ ಪಡೆದ ಪೊಲೀಸರು

CEC ಜ್ಞಾನೇಶ್ ಕುಮಾರ್ ವಿರುದ್ಧ ಸಿಜೆಪಿ ಪ್ರತಿಭಟನೆ ವೇಳೆ 2 ಪೊಲೀಸರಿಗೆ ಕಲ್ಲೇಟು!