ಮತ್ತೆ ಸೋಲಿನ ಸುಳಿಗೆ ಸಿಲುಕಿದ ಕರ್ನಾಟಕ
ಭಾನುವಾರ ಹರ್ಯಾಣ ತಂಡವನ್ನು 93-73ರಿಂದ ಮಣಿಸಿ ಮೊದಲ ಗೆಲುವು ಸಾಧಿಸಿದ್ದ ಕರ್ನಾಟಕ ಸೋಮವಾರ ನಡೆದ ಪಂದ್ಯದಲ್ಲಿ 73-84 ಪಾಯಿಂಟ್ಗಳಿಂದ ದೆಹಲಿಗೆ...
ಮೈಸೂರು: ಭಾನುವಾರ ಹರ್ಯಾಣ ತಂಡವನ್ನು 93-73ರಿಂದ ಮಣಿಸಿ ಮೊದಲ ಗೆಲುವು ಸಾಧಿಸಿದ್ದ ಕರ್ನಾಟಕ ಸೋಮವಾರ ನಡೆದ ಪಂದ್ಯದಲ್ಲಿ 73-84 ಪಾಯಿಂಟ್ಗಳಿಂದ ದೆಹಲಿಗೆ ಮಣಿಯುವ ಮೂಲಕ ಮತ್ತೆ ಸೋಲಿನ ಸುಳಿಗೆ ಸಿಲುಕಿತು.
ಇಲ್ಲಿನ ಚಾಮುಂಡೇಶ್ವರಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 66ನೇ ಹಿರಿಯರ ಪುರುಷ ಮತ್ತು ಮಹಿಳಾ ರಾಷ್ಟ್ರೀಯ ಬಾಸ್ಕೆಟ್ಬಾಲ್ ಚಾಂಪಿಯನ್ ಶಿಪ್ ಪಂದ್ಯಾವಳಿಯ ಪುರುಷರ ವಿಭಾಗದಲ್ಲಿ ದೆಹಲಿ ತಂಡದ ಗೋಪಾಲ್ ರಾಮ್ (33 ಪಾಯಿಂಟ್), ಪರ್ವೀನ್ ದೊವನ್ (22 ಪಾಯಿಂಟ್) ಉತ್ತಮ ಪ್ರದರ್ಶನದ ಮೂಲಕ ಆತಿಥೇಯ ಕರ್ನಾಟಕವನ್ನು ಸೋಲಿಸಿದರು.
ಉಳಿದಂತೆ ಉತ್ತರ ಪ್ರದೇಶವು 65-42ರಿಂದ ಜಮ್ಮು ಮತ್ತು ಕಾಶ್ಮೀರ ವಿರುದ್ಧ ಮಹಾರಾಷ್ಟ್ರ ತಂಡವು 71-29 ರಿಂದ ಅರುಣಾಚಲ ಪ್ರದೇಶ ವಿರುದ್ಧ, ಛತ್ತೀಸ್ ಗಡ ತಂಡವು 84-45ರ ಭಾರಿ ಅಂತರದಿಂದ ಪಾಂಡಿಚೇರಿ ವಿರುದ್ಧ, ಪಶ್ಚಿಮ ಬಂಗಾಳವು 74-33 ರಿಂದ ಜಾರ್ಖಂಡ್ ವಿರುದ್ಧ, ರಾಜಸ್ತಾನ 73-27 ರಿಂದ ವಿಜೋರಾಂ ವಿರುದ್ಧ, ಬಿಹಾರ 46-33ರಿಂದ ತ್ರಿಪುರ ವಿರುದ್ಧ, ಓಡಿಶಾ 72-49 ರಿಂದ ಗೆದ್ದವು.