ಕ್ರೀಡೆ

ಭಾರತದ ಅಂಡರ್ 19 ಕ್ರಿಕೆಟ್ ತಂಡದ ನಾಯಕ ಇಶಾನ್ ಬಂಧನ

Mainashree
ನವದೆಹಲಿ: ಹೊಡೆದಾಟ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅಂಡರ್ 19 ಕ್ರಿಕೆಟ್ ತಂಡದ ನಾಯಕ ಇಶಾನ್ ಕಿಶನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳವಾರ ರಾತ್ರಿ ಬಿಹಾರದ ಪಾಟ್ನಾದಲ್ಲಿ ತನ್ನ ತಂದೆಯವರ ಕಾರನ್ನು ತೆಗೆದುಕೊಂಡು ವೇಗವಾಗಿ ಕಾರು ಚಲಾಯಿಸುಕೊಂಡು ಹೋಗುತ್ತಿರಬೇಕಾದರೆ ಆಟೋ ರಿಕ್ಷಾವೊಂದಕ್ಕೆ ಡಿಕ್ಕಿ ಹೊಡೆದಿದ್ದಾರೆ. ಇದರಿಂದಾಗಿ ಆಟೋದಲ್ಲಿ ಕೆಲವರು ಗಾಯಗೊಂಡಿದ್ದಾರೆ.
ಅಪಘಾತವಾಗುತ್ತಿದ್ದಂತೆ ಅಲ್ಲೇ ಸ್ಥಳದಲ್ಲಿ ಜನರು ಸೇರಿದ್ದಾರೆ. ಈ ವೇಳೆ ಸ್ಥಳಿಯರೊಂದಿಗೆ ಇಶಾನ್ ವಾಗ್ಧಾಳಿ ನಡೆಸಿದ್ದಾರೆ. ಆಟೋದಲ್ಲಿ ಮತ್ತೆ ಕೆಲವರು ಇಶಾನ್ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಅಷ್ಟರಲ್ಲಿ ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಇಶಾನ್ ಅವರನ್ನು ಬಂಧಿಸಿದ್ದು, ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೇ, ಇಶಾನ್ ವಿರುದ್ಧ ಅಜಾಗರೂಕತೆಯ ವಾಹನ ಚಾಲನೆ, ಅಪರಿಚಿತರ ವಾಹನ ಹಾನಿ ಮತ್ತು ಅನುಚಿತ ವರ್ತನೆ ಅಡಿ ಪ್ರಕರಣ ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
SCROLL FOR NEXT