ಎಬಿ ಡಿವಿಲಿಯರ್ಸ್ 
ಕ್ರೀಡೆ

ನಿವೃತ್ತಿ ಸುದ್ದಿ: ಮಾಧ್ಯಮ ವರದಿಯನ್ನು ಒಪ್ಪಿಕೊಂಡ ಎಬಿ ಡಿವಿಲಿಯರ್ಸ್

ಇತ್ತೀಚೆಗೆ ಮಾಧ್ಯಮಗಳಲ್ಲಿ ಬಂದಿದ್ದ ಎಬಿ ಡಿವಿಲಿಯರ್ಸ್ ಅವರ ನಿವೃತ್ತಿಯ ವರದಿ ಸ್ವಲ್ಪ ಸತ್ಯ ಎಂದು ಸ್ವತಃ ದಕ್ಷಿಣ ಆಫ್ರಿಕಾದ ಖ್ಯಾತ ಆಟಗಾರ...

ಜೊಹಾನ್ಸ್‍ಬರ್ಗ್: ಇತ್ತೀಚೆಗೆ ಮಾಧ್ಯಮಗಳಲ್ಲಿ ಬಂದಿದ್ದ ಎಬಿ ಡಿವಿಲಿಯರ್ಸ್ ಅವರ ನಿವೃತ್ತಿಯ ವರದಿ ಸ್ವಲ್ಪ ಸತ್ಯ ಎಂದು ಸ್ವತಃ ದಕ್ಷಿಣ ಆಫ್ರಿಕಾದ ಖ್ಯಾತ ಆಟಗಾರ ಒಪ್ಪಿಕೊಂಡಿದ್ದಾರೆ. ಆ ಮೂಲಕ ಡಿವಿಲಿಯರ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಶೀಘ್ರದಲ್ಲಿ ವಿದಾಯ ಹೇಳುವುದು ಬಹುತೇಕ ಖಚಿತವಾಗುತ್ತಿದೆ. ಆದರೆ ಡಿವಿಲಿಯರ್ಸ್ ಯಾವ ಮಾದರಿ ಕ್ರಿಕೆಟ್‍ಗೆ ನಿವೃತ್ತಿ ಪಡೆಯಲಿದ್ದಾರೆ. ಅಥವಾ ಎಲ್ಲಾ ಮಾದರಿಗೂ ವಿದಾಯ ಹೇಳುವರೇ ಎಂಬುದು ಮಾತ್ರ ತಿಳಿದು ಬಂದಿಲ್ಲ. 'ಪ್ರಸ್ತುತ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ದ.ಆಫ್ರಿಕಾ ತಂಡದ ನಾಯಕ ಸ್ಥಾನದಿಂದ ಹಾಶೀಂ ಆಮ್ಲಾ ಕೆಳಗಿಳಿದಿರುವು ದರಿಂದ, ಮುಂದಿನ ಎರಡು ಪಂದ್ಯಗಳಿಗೆ ತಂಡದ ಜವಾಬ್ದಾರಿ ನಿರ್ವಹಿಸಲು ಸಿದ್ಧನಾಗಿದ್ದೇನೆ. ಆದರೆ ನಿವೃತ್ತಿಯ ಕುರಿತ ವರದಿಗಳು ಸಂಪೂರ್ಣ ಸುಳ್ಳಲ್ಲ'' ಎಂದು ಡಿವಿಲಿಯರ್ಸ್ ತಿಳಿಸಿದ್ದಾರೆ. 'ಆಗಾಗ್ಗೆ ನನ್ನ ಆಟವನ್ನು ನಾನು ಆನಂದಿಸುತ್ತಿಲ್ಲವೆಂಬ ಭಾವನೆ ಮೂಡುತ್ತಿದೆ. ಈ ಬಗ್ಗೆ ನನ್ನ ಆಪ್ತರ ಜತೆ ಚರ್ಚಿಸಿದ್ದೇನೆ. ಹಾಗಾಗಿ ಈ ವಿಷಯ ಸೋರಿಕೆಯಾಗುವುದು ಸಹಜ. ಆದರೆ, ಈಗಲೂ ನಾನು ಪೂರ್ಣ ಪ್ರಮಾಣದೊಂದಿಗೆ ಆಡುತ್ತಿದ್ದೇನೆ. ಸದ್ಯ ಸರಣಿಯಲ್ಲಿ ಎರಡು ಟೆಸ್ಟ್ ಪಂದ್ಯಗಳು ಬಾಕಿ ಉಳಿದಿವೆ. ಅದರ ಬಗ್ಗೆ ಮಾತ್ರ ಹೆಚ್ಚು ಗಮನ ಹರಿಸುತ್ತಿದ್ದೇನೆ'' ಎಂದು ಡಿವಿಲಿಯರ್ಸ್ ತಿಳಿಸಿರುವುದಾಗಿ ಖಾಸಗಿ ಪತ್ರಿಕೆಯೊಂದು ವರದಿ ಮಾಡಿದೆ. ಸರಣಿ ಮೇಲೆ ಕುಕ್ ಕಣ್ಣು: ಏತನ್ಮಧ್ಯೆ ಗುರುವಾರದಿಂದ ವಾಂಡರರ್ಸ್ ಕ್ರೀಡಾಂಗಣದಲ್ಲಿ ಆರಂಭವಾಗುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಿ ಅದರೊಂದಿಗೆ ಸರಣಿಯನ್ನು ಜಯಿಸುವ ಗುರಿ ಹೊತ್ತಿರುವುದಾಗಿ ಪ್ರವಾಸಿ ಇಂಗ್ಲೆಂಡ್ ತಂಡದ ನಾಯಕ ಅಲೆಸ್ಟೈರ್ ಕುಕ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

ಮತ ಬೇಟೆ ತಡೆಯಲು 'ಕೈ' ಕಲಿಗಳ ಮಾಸ್ಟರ್ ಪ್ಲ್ಯಾನ್: ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ, ಬೂತ್ ಮಟ್ಟದಲ್ಲಿ ಸಮರಕ್ಕೆ ಸಜ್ಜು..!

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ

ಕೋಟಿ ಕೋಟಿ ಲೂಟಿ: ಅರಣ್ಯ ಇಲಾಖೆ ಮಾಜಿ ಅಧಿಕಾರಿಗೆ ಕೋರ್ಟ್ ಶಾಕ್; ಬರೋಬ್ಬರಿ 1.38 ಕೋಟಿ ದಂಡ, 3 ವರ್ಷ ಜೈಲು ಶಿಕ್ಷೆ..!