ನವದೆಹಲಿ: ಇದೇ ತಿಂಗಳು 18ರಿಂದ ಫೆಬ್ರವರಿ 21ರವರೆಗೆ ನಡೆಯಲಿರುವ ನಾಲ್ಕನೇ ಹಾಕಿ ಇಂಡಿಯಾ ಲೀಗ್ (ಎಚ್‍ಐಎಲ್) ಪಂದ್ಯಾವಳಿಯ ಒಟ್ಟಾರೆ ಬಹುಮಾನ ಮೊತ್ತ ರು. 5.70 ಕೋಟಿ ರೂ. ಆಗಿದೆ.
ವಿಜೇತ ತಂಡ ರು. 2.50 ಕೋಟಿ ಪಡೆಯಲಿದ್ದರೆ, ರನ್ನರ್‍ಅಪ್ ತಂಡ ರು. 1.75 ಕೋಟಿ ಪಡೆಯಲಿದೆ. ಇನ್ನು ಪಂದ್ಯಾವಳಿಯಲ್ಲಿ ಮೂರನೇ ಸ್ಥಾನ ಪಡೆಯುವ ತಂಡ ರು. 75 ಲಕ್ಷ ಪಡೆಯಲಿದೆ.
ಇನ್ನು ಟೂರ್ನಿಯ `ಕೋಲ್ ಇಂಡಿಯಾ ಆಟಗಾರ ರು. 50 ಲಕ್ಷ ಬಹುಮಾನ ಪಡೆಯಲಿದ್ದರೆ, ಪಂದ್ಯದ `ಕೋಲ್ ಇಂಡಿಯಾ ಗೋಲ್' ಆಟಗಾರ ಹಾಗೂ ಪಂದ್ಯಶ್ರೇಷ್ಠ ಆಟಗಾರ ತಲಾ ರು. 50 ಸಾವಿರ ಬಹುಮಾನ ಪಡೆಯಲಿದ್ದಾರೆ.