ರಷ್ಯಾ ಡೋಪಿಂಗ್ 
ಕ್ರೀಡೆ

ರಷ್ಯಾ ಡೋಪಿಂಗ್ ಹಗರಣ ಮುಚ್ಚಿಟ್ಟಿದ್ದ ಐಎಎಎಫ್?

ಇತ್ತೀಚೆಗಷ್ಟೇ ವ್ಯಾಪಕ ಉದ್ದೀಪನಾ ಮದ್ದು ಸೇವಿಸಿದ ಆರೋಪಕ್ಕೆ ಸಿಲುಕಿರುವ ರಷ್ಯಾದ ಅಥ್ಲೀಟ್ಗಳಿಗೆ ಆರು ವರ್ಷಗಳ ನಿಷೇಧ ಹೇರಿರುವ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್...

ಪ್ಯಾರಿಸ್: ಇತ್ತೀಚೆಗಷ್ಟೇ ವ್ಯಾಪಕ ಉದ್ದೀಪನಾ ಮದ್ದು ಸೇವಿಸಿದ ಆರೋಪಕ್ಕೆ ಸಿಲುಕಿರುವ ರಷ್ಯಾದ ಅಥ್ಲೀಟ್ಗಳಿಗೆ ಆರು ವರ್ಷಗಳ ನಿಷೇಧ ಹೇರಿರುವ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಸಂಸ್ಥೆ (ಐಎಎಎಫ್)ಗೆ ಈ ವಿಚಾರ ಮೊದಲೇ ತಿಳಿದಿತ್ತು.

ಅದು ಗೊತ್ತಿದ್ದರೂ, ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಮಾಹಿತಿಯನ್ನು ದಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ರಷ್ಯಾದ ಇಡೀ ಕ್ರೀಡಾವಲಯವನ್ನೇ ಡೋಪಿಂಗ್ ಪೆಡಂಭೂತ ಆಪೋಶನ ತೆಗೆದುಕೊಂಡಿರುವ ವಿಚಾರ 2012ರಲ್ಲಿ ನಡೆದ ಲಂಡನ್ ಒಲಿಂಪಿಕ್ಸ್ ಗೂ ಮುನ್ನವೇ ಐಎಎಎಫ್ ತಿಳಿದಿತ್ತು. ಆದರೆ, 2015ರಲ್ಲಿ ಆ ದೊಡ್ಡ ಹಗರಣ ಮಾಧ್ಯಮಗಳ ಮೂಲಕ ಬೆಳಕಿಗೆ ಬಂದಾಗ ಹಿಂದೆ ತನಗೆ ತಿಳಿದಿಲ್ಲವೆಂಬ ನಾಟಕವಾಡಿತ್ತೆಂದು ವರದಿಯಲ್ಲಿ ಹೇಳಲಾಗಿದೆ.

ಏಕೆಂದರೆ, 2009ರಲ್ಲಿ ಐಎಎಎಫ್ ಜಗತ್ತಿನ ಎಲ್ಲಾ ಅಥ್ಲೀಟ್ಗಳನ್ನು ಡೋಪಿಂಗ್ ಟೆಸ್ಟ್ ಗೆ ಒಳಪಡಿಸಿತ್ತು. ಅದೇ ಸಂದರ್ಭದಲ್ಲಿ ರಷ್ಯಾದ ಬಹುತೇಕ ಕ್ರೀಡಾಳುಗಳು ಉದ್ದೀಪನಾ ಮದ್ದಿನ ದಾಸರಾಗಿರುವುದು ಬೆಳಕಿಗೆ ಬಂದಿತ್ತು. ಆದರೆ, ಅವುಗಳು ಶಿಸ್ತು ಕ್ರಮ ಜರುಗಿಸುವಷ್ಟು ಕಳ್ಳಾಟವನ್ನು ಸಾಬೀತುಪಡಿಸುವಂತಿರಲಿಲ್ಲ. ಆದರೂ, ರಷ್ಯಾಗೆ ಆ ದೇಶದ ಅಥ್ಲೀಟ್‍ಗಳ ಕಳ್ಳಾಟದ ಕುರಿತು ಎಚ್ಚರಿ ಕೆಯ ಸಂದೇಶ ರವಾನಿಸಿತ್ತೆನ್ನಲಾಗಿದೆ. ಗುಟ್ಟು ರಟ್ಟಾದ ಬಗೆ: ಎಐಎಎಫ್ಎಎಫ್ನ ಅಧಿಕಾರಿಗಳು, ಸಿಬ್ಬಂದಿಗಳ ನಡುವೆ 2009ರಲ್ಲಿ ಹರಿದಾಡಿದೆ ಎನ್ನಲಾಗಿರುವ ಇಮೇಲ್, ವರದಿಗಳು ಹಾಗೂ ಪತ್ರ ವ್ಯವಹಾರಗಳ ದಾಖಲೆಗಳನ್ನು ಎಪಿ ವಶಪಡಿಸಿಕೊಂಡಿದೆ.

ಎಪಿಯ ಪ್ರಕಾರ, ಹೆಸರನ್ನು ಗೌಪ್ಯವಾ ಗಿಡುವ ವಾಗ್ದಾನದ ಮೇಲೆ ಐಎಎಎಫ್ಎಎಫ್ಗೆ ಸಂಬಂಧಪಟ್ಟ ವ್ಯಕ್ತಿಯೊಬ್ಬ ಇವುಗಳನ್ನು ತನಗೆ ರವಾನಿಸಿದ್ದಾಗಿ ಎಪಿ ಹೇಳಿಕೊಂಡಿದೆಂಯೆಂದು ವರದಿಯಲ್ಲಿ ಹೇಳಲಾಗಿದೆ. ಪತ್ರ ರವಾನಿಸಿ ಸುಮ್ಮನಾದರೇ?: ಕಳ್ಳಾಟದ ಸುಳಿವು ಸಿಗುತ್ತಿದ್ದಂತೆಯೆ ಅಂದಿನ ರಷ್ಯಾ ಅಥ್ಲೆ ಟಿಕ್ಸ್ ಸಂಸ್ಥೆ ಅಧ್ಯಕ್ಷ ವ್ಯಾಲೆಂಟೈನ್ ಬಾಲಾಕ್ನಿಚೆವ್‍ಗೆ ಪತ್ರ ಬರೆದಿದ್ದ ಎಐಎಎಫ್ಎಎಫ್ ಮಹಾ ಕಾರ್ಯ ದರ್ಶಿ ಪಿಯರ್ಸ್ ವೈಯಿಸ್ 'ರಷ್ಯಾ ಆಟಗಾರರ ರಕ್ತ ಪರೀಕ್ಷೆ ವರದಿಯ ಫಲಿತಾಂಶಗಳು ಗಂಭೀರ ವಿಚಾರ(ಡೋಪಿಂಗ್)ದ ಕಡೆಗೆ ಬೆಳಕು ಚೆಲ್ಲಿವೆ. ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ವ್ಯಾಪಕ ಡೋಪಿಂಗ್ ಅವರ ಪ್ರಾಣಕ್ಕೂ ಸಂಚಕಾರ ತರಬಹುದು'' ಎಂದು ಸೂಚನೆ ನೀಡಿದ್ದರು. ಆದರೆ, ಇಷ್ಟು ಹೇಳಿದ ನಂತರ ಎಐಎಎಫ್ಎಎಫ್ ಸುಮ್ಮನಾಯಿತು.

ರಷ್ಯಾ ಅಥ್ಲೆಟಿಕ್ಸ್ ಸಂಸ್ಥೆ ಕ್ರಮ ಕೈಗೊಂಡಿತೇ ಇಲ್ಲವೇ ಎಂಬುದರ ಕಡೆಗೂ ಅದು ಗಮನ ಕೊಡಲಿಲ್ಲ. 2015ರಲ್ಲಿ ಇದು ಸ್ಫೋಟವಾದಾಗ ಎಚ್ಚೆತ್ತಂತೆ ನಟಿಸಿದ ಐಎಎಎಫ್ ಶಿಸ್ತುಕ್ರ ಮದ ಹೆಸರಿನಲ್ಲಿ ಆಗಲೂ ರಷ್ಯಾ ಅಥ್ಲೆಟಿಕ್ಸ್ ಸಂಸ್ಥೆಯ ಅಧ್ಯಕ್ಷರಾಗಿದ್ದ ವ್ಯಾಲೆಂಟೈನ್ ಅವರನ್ನು ಅಮಾನತುಗೊಳಿಸಿ, ಉಗ್ರ ಕ್ರಮ ಕೈಗೊಂಡಂತೆ ನಟಿಸಿತು ಎಂದು ವರದಿಯಲ್ಲಿ ಟೀಕಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT